Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ, ಗೋವಿಂದ ಕಾರಜೋಳ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಒಂದು ಕಾಲದಲ್ಲಿ ಮನೆಯಿಂದ ಹಣ ಖರ್ಚು ಮಾಡಿ ಚುನಾವಣೆ ಮಾಡುವ ಒಂದು ಕಾಲವಿತ್ತು. ಆದ್ರೆ ಇದೀಗ ಕಾಂಗ್ರೆಸ್’ನವರು ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಆಯ್ಕೆಯಾಗಿದ್ದಾರೆ. ಜನರಿಗೆ ಭರವಸೆ ಕೊಟ್ಟು ಅವುಗಳನ್ನು ಪಕ್ಷದ ಹಣದಿಂದ ಕೊಡದೇ ಸರ್ಕಾರದ ಖಜಾನೆಯಿಂದ ಕೊಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿವಕುಮಾರ ಸ್ವಂತದ ಹಣ ಹಣದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಸರ್ಕಾರದ ಖಜಾನೆಯಲ್ಲಿನ ಹಣವನ್ನು ಖರ್ಚು ಮಾಡಿ ಮೋಸ ಮಾಡಿ ಅಧಿಕಾರಕ್ಕೆ ಬಂದರು ಎಂದು ಕಾರಜೋಳ ಆರೋಪಿಸಿದ್ದಾರೆ.
ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರು ಯಾವುದೇ ಅಭಿವೃದ್ಧಿ ಆಗಿಲ್ಲ. ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ, ಹಿಂಗಾರು, ಮುಂಗಾರು ಕೈಕೊಟ್ಟಿದೆ. ಧಾರವಾಡ ಜಿಲ್ಲೆಯಲ್ಲಿಯೇ 2 ಲಕ್ಷ 20 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರು ಬೋರವೇಲ್’ಗಳನ್ನು ಉಪಯೋಗಿಸಲು ಸರಿಯಾಗಿ ವಿದ್ಯುತ್ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ರೈತರಿಗೆ 2 ತಾಸು ವಿದ್ಯುತ್ ಕೊಡುತ್ತೇನೆ ಎಂದು ಹೇಳತ್ತಾರೆ ಆದರೆ ಎರಡು ತಾಸು ಸಹ ಸರಿಯಾಗಿ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪ್ರತಿ ವರ್ಷ ವಿದ್ಯುತ್ ಮಾರಾಟ ಮಾಡಿ 2-3 ಸಾವಿರ ಕೋಟಿ ಹಣವನ್ನು ಸರ್ಕಾರದ ಖಜಾನೆಗೆ ಕೊಟ್ಟಿದ್ದೇವೆ. ಆದ್ರೆ ಕಾಂಗ್ರೆಸ್’ನವರು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ತಿರುಗಾಡಿದರೇ ಹೊರತು ಮಳೆಯಿಲ್ಲ ವಿದ್ಯುತ್ ಸಮಸ್ಯೆ ಆಗುತ್ತೆ ಎನ್ನುವ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಈ ಸರ್ಕಾರಕ್ಕೆ ಯಾವುದೇ ರೀತಿಯ ಮುಂದಾಲೋಚನೆಯಿಲ್ಲ. ಕಲ್ಲಿದ್ದಲನ್ನು ಮೊದಲೇ ಖರೀದಿ ಮಾಡಿ ಶೇಖರಿಸಿ ಇಟ್ಟಿದ್ದರೇ ನಮಗೆ ಯಾವುದೇ ವಿದ್ಯುತ್ ಸಮಸ್ಯೆ ಆಗುತ್ತಿರಲಿಲ್ಲ.
ಸಿದ್ದರಾಮಯ್ಯ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡುವ ಕೆಲಸ ಮಾಡುತ್ತಾರೆ. ಇದೀಗ ಕಲ್ಲಿದ್ದಲು ಖರೀದಿ ಮಾಡಲು ಹೋದರೆ ಇದೀಗ ಆಗುವುದಿಲ್ಲ. ರಾಜ್ಯದಲ್ಲಿ ವಿದ್ಯುತ್ ಅಭಾವಕ್ಕೆ ನೇರವಾಗಿ ಸಿದ್ದರಾಮಯ್ಯ, ಡಿಕೆಶಿ ಕಾರಣ. ಆದ್ರೆ ಪ್ರತಿಯೊಂದು ವಿಚಾರದಲ್ಲಿಯೂ ಕಾಂಗ್ರೆಸ್’ನವರು ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುವುದನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಾರಜೋಳ ಹರಿಹಾಯ್ದಿದ್ದಾರೆ.
ಇವತ್ತು ಜಿಲ್ಲೆಯ ನಾಲ್ಕು ತಾಲೂಕಿನ ಜನರು ಗೂಳೆ ಹೊರಟ್ಟಿದ್ದಾರೆ. ರೈತರು ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಮೇವು ಸಿಗುತ್ತಿಲ್ಲ. ರೈತರಿಗೆ ಮೇವು ಬ್ಯಾಂಕ್ ಮಾಡಿ, ಮೇವು ಪೂರೈಸುವ ಕೆಲಸ ಸರ್ಕಾರ ಮಾಡಬೇಕಿತ್ತು ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಆಗಿದೆ ಅದನ್ನು ನಿವಾರಿಸುವ ಕೆಲಸ ಸರ್ಕಾರ ಮಾಡಿಲ್ಲ. ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ.
ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಿನ ಭರವಸೆ ನೀಡಿದ ಲಾಡ್
ಜಮೀನು ವಿಚಾರಕ್ಕೆ ಬಂದೂಕಿನಿಂದ ಶೂಟ್ ಮಾಡಿದ ದುಷ್ಕರ್ಮಿಗಳು, ತಂದೆ ಮಡಿಲಲ್ಲೇ ಪ್ರಾಣಬಿಟ್ಟ ಮಗ
ಲೋಕಸಭಾ ಚುನಾವಣೆಗೆ ಕೈ ಭರ್ಜರಿ ತಯಾರಿ: ಮುಖ್ಯಮಂತ್ರಿ ಮನೆಯಲ್ಲಿ ಸಚಿವರ ಸಭೆ