Political News: ಧಾರವಾಡ: ದೇವಸ್ಥಾನ ಕಟ್ಟೆಯೊಂದರ ಮೇಲೆ ತಾನು ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ವಿಶೇಷ ಚೇತನ ಮಹಿಳೆಯೊಬ್ಬರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮೊರೆ ಇಟ್ಟಿದ್ದಾರೆ.
ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಶಂಕ್ರಮ್ಮ ಏಣಗಿ ಎಂಬ ವಿಶೇಷ ಚೇತನ ಮಹಿಳೆ, ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದ್ದ ಸಚಿವ ಸಂತೋಷ ಲಾಡ್ ಅವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದು, ತನಗೆ ಸೂರು ಒದಗಿಸಬೇಕು ಎಂದು ಮನವಿ ಮಾಡಿದ್ದಾಳೆ.
ಎರಡೂ ಕಾಲು ಕಳೆದುಕೊಂಡಿರುವ ಮಹಿಳೆ ಕೈಗಳ ಸಹಾಯದಿಂದಲೇ ಮುಂದೆ ಸಾಗಬಲ್ಲರು. ತಾನು ಚಿಕ್ಕಮಲ್ಲಿಗವಾಡ ಗ್ರಾಮದ ದೇವಸ್ಥಾನದ ಕಟ್ಟೆಯೊಂದರ ಮೇಲೆ ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ಇವರ ಸಮಸ್ಯೆಯನ್ನು ಸೌಜನ್ಯದಿಂದ ಆಲಿಸಿದ ಸಚಿವ ಲಾಡ್, ಸೂರು ಒದಗಿಸುವ ಭರವಸೆ ನೀಡಿದರು.
ಇನ್ನು ಕಾರ್ಯಕ್ರಮದೂದಕ್ಕೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಚಿವ ಸಂತೋಷ ಲಾಡ್ ಅವರು ಬರಿಗಾಲಿನಲ್ಲಿ ನಿಂತು ಸರಳತೆಯನ್ನು ಮೆರೆದ್ರು. ಸಚಿವ ಸಂತೋಷ ಲಾಡ್ ಅವರ ಸರಳತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು.
ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ?- ಮಾಜಿ ಸಚಿವ ಗೋವಿಂದ ಕಾರಜೋಳ