Wednesday, April 16, 2025

Latest Posts

ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!

- Advertisement -

Hubballi Political News: ಹುಬ್ಬಳ್ಳಿ: ಸರ್ಕಾರ ಬಿಳಿಸುವ ಪ್ರವೃತ್ತಿ ಇರೋರು ಬಿಜೆಪಿ ಅವರಿಗೆ. ಅಧಿಕಾರಕ್ಕಾಗಿ ಸರ್ಕಾರವನ್ನೇ ಬೀಳಿಸಿದವರು ಬಿಜೆಪಿಗರು. ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ಅಧಿಕಾರಕ್ಕಾಗಿ ಮಧ್ಯ ಪ್ರದೇಶ, ಗೋವಾ ಸರ್ಕಾರವನ್ನು ಬೀಳಿಸಿದ್ರು ಎಂದು ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಶೀಲನೆ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 6 ಭಾಗದಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಟುಕೊಂಡಿದ್ದೇವು. ಕಳೆದ 40 ನಿಮಿಷದಿಂದ ಜೋರಾಗಿ ಮಳೆ ಬರ್ತಾ ಇದೆ. ನಾವು ತೆರಳಬೇಕಾದ ಸ್ಥಳದಲ್ಲೂ ಮಳೆ ಬರ್ತಾ ಇದೆ. ಇನ್ನು ಎರಡುಮೂರು ದಿನ ಹೀಗೆ ಮಳೆ ಮುಂದುವರಿಯಲಿ. ಆಕಸ್ಮಿಕವಾಗಿ ಮಳೆ ಬಂದಿದೆ ಹೀಗಾಗಿ ಬರ ವೀಕ್ಷಣೆ ಮುಂದುವರೆಸಲು ಆಗೋದಿಲ್ಲ. ಇಲ್ಲಿ ಬಂದ ಸಾರ್ವಜನಿಕರೊಂದಿಗೆ ಚರ್ಚೆ ಮಾಡ್ತೇವೆ. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದು ಮಳೆಗೆ ಧನ್ಯವಾದಗಳನ್ನು ತಿಳಿಸಿದರು.

ಸರ್ಕಾರದ ಬಗ್ಗೆ ಹೊರ ರಾಜ್ಯದಲ್ಲಿ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೋದಿ ಸಾಹೇಬರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಇವತ್ತು ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ಕೊಟ್ಟಿದೆ? ರಾಜ್ಯ ಸರ್ಕಾರ ಏನು ಮಾಡಿದೆ ಅಂತ ಅವರು ಯಾವತ್ತೂ ಹೇಳೋದಿಲ್ಲ ಎಂದು ಅವರು ಪ್ರಧಾನಮಂತ್ರಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ವ್ಯಾಪಮ್ ಸ್ಕೀಮ್ ದೊಡ್ಡ ಹಗರಣ ಪ್ರಪಂಚದಲ್ಲೇ ಪಿಕ್ಚರ್ ಮಾಡಬಹುದು. ಯಾರು ವಿಟ್ನೆಸ್ ಆಗಿದ್ರು ಮಧ್ಯಪ್ರದೇಶದಲ್ಲಿ 48 ಜನರಲ್ಲಿ 44 ಜನರು ಹತ್ಯ ಆಗಿದ್ದಾರೆ. 25 ಕೋಟಿ ರಸ್ತೆಯನ್ನು ಸುಮಾರು 250 ಕೋಟಿಗೆ ಒಂದು ಕಿ.ಮೀ ರಸ್ತೆ ಆಗಿದೆ ಅಂತ ರಿಪೋರ್ಟ್ ಅವರು ಕೊಟ್ಟಿದ್ದಾರೆ. ರಾಮ ಮಂದಿರದಲ್ಲೂ ಭ್ರಷ್ಟಾಚಾರ ಆಗಿದೆ ಅಂತ ವರದಿ ಕೊಟ್ಟಿದ್ದಾರೆ. ಇಂತಹ ಹಲವಾರು ವಿಷಯಗಳನ್ನು ಬಿಟ್ಟಿದ್ದಾರೆ. ನಮ್ಮ ಮೇಲೆ ಮಾತನಾಡೋದು ಎಷ್ಟು ಸರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಸಲ್ಮಾನ್ ಕುಟುಂಬದಿಂದ ಹಾಸನಾಂಬೆ ದರ್ಶನ

ಶೆಟ್ಟರ್ ನೇತೃತ್ವದ ಆಪರೇಷನ್ ಹಸ್ತ ಸಕ್ಸಸ್.. ಪ್ರಮುಖ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ?- ಮಾಜಿ ಸಚಿವ ಗೋವಿಂದ ಕಾರಜೋಳ

- Advertisement -

Latest Posts

Don't Miss