Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಸಿದ ಜನತಾ ದರ್ಶನ ಕಾರ್ಯಕ್ರಮ ವಿಶೇಷ ಚೇತನ ಮಹಿಳೆ ಪಾಲಿಗೆ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಂಗಾರವಾಗಿದೆ.
2 ಕಾಲಿಲ್ಲದೇ ಮಗನನ್ನು ಸಾಕಿ ಸಲುಹುತ್ತಿರುವ, ಬದುಕಿನ ಬಂಡಿ ಸಾಗಿಸಲು ಕಷ್ಟಪಡುತ್ತಿರುವ ಮಹಿಳೆ ಪಾಲಿಗೆ ನೀಜಕ್ಕೂ ನವೆಂಬರ್ 6 ರಂದು ನಡೆದ ಜನತಾ ದರ್ಶನ ಕಾರ್ಯಕ್ರಮ ಶುಭ ಸಂಕೇತವಾಗಿದೆ.
ಕಲಘಟಗಿ ಮತಕ್ಷೇತ್ರದ ಚಿಕ್ಕಮಲಿಗವಾಡ ಗ್ರಾಮದ ಕಾರ್ಮಿಕ ಮಹಿಳೆ ಶಂಕ್ರಮ್ಮ ಏಣಗಿ, ಬೇರೆಯವರ 2 ಮನೆಗೆಲಸ ಮಾಡಿಕೊಂಡು, ಬರುವ ಆದಾಯದಿಂದ ಕುಟುಂಬ ಜೀವನ ಮಾಡಿಕೊಂಡು, ಮಗನನ್ನು ಕೂಡ ಸಾಕಿ ಸಲುಹುತ್ತಿದ್ದಾಳೆ.
ಕಾರ್ಮಿಕ ಮಹಿಳೆಗೆ ಶಾಶ್ವತವಾಗಿ ಮನೆ ಕೊಡಿಸಲು ಕಾರ್ಮಿಕ ಸಚಿವ ಸಂತೋಷ ಲಾಡ್ ಮುಂದಾಗಿದ್ದಾರೆ. ಶಂಕ್ರಮ ಎನ್ನುವಳಿಗೆ ಮನೆ ಸಿಗೋದು ವಿಳಂಬವಾದ್ರೂ ಕೂಡ, ಖಂಡಿತವಾಗಿಯೂ ಪ್ರಾಮಾಣಿಕವಾಗಿ ಮನೆ ಕೊಡಿಸುವೆ ಎಂದಿದ್ದಾರೆ ಸಚಿವ ಸಂತೋಷ ಲಾಡ್.
ಧಾರವಾಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಮನೆಗಾಗಿ ಅಲೆದಾಟ ನಡೆಸಿದ್ದ ಶಂಕ್ರಮ್ಮ, ನವೆಂಬರ್ 6 ರಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಶ್ವತ ಮನೆಗಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಮನೆ ಮಾಡಿಕೊಟ್ಟರೆ, ಸಚಿವ ಸಂತೋಷ ಲಾಡ್ ಅವರ ಸಹಾಯಕ್ಕೆ ಯಾವತ್ತಿಗೂ ಚಿರ ಋಣಿ ಎಂದು ಸಂತಸ ಹಂಚಿಕೊಳ್ತಾರೆ ವಿಶೇಷ ಚೇತನ ಮಹಿಳೆ ಶಂಕ್ರಮ್ಮ.
ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?
ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!
‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’