Vijayanagara News: ವಿಜಯನಗರ: ರಾಜ್ಯ ಸರ್ಕಾರವೂ ಹಣ ಕೊಡದದೇ, ಇತ್ತ DMF KMERC ಹಣವೂ ಇಲ್ಲದೇ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡೋದು ಅಂತ ಶಾಸಕರು ಅಳಲು ತೋಡಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣನಾಯಕ್ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜ್ಯದಲ್ಲಿ ಒಂದು ಕಡೆ ಬರಗಾಲ, ಮತ್ತೊಂದು ಕಡೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವಿಲ್ಲ. ಅದ್ರಲ್ಲೂ ಬಿಜೆಪಿ, ಜೆಡಿಎಸ್ ಶಾಸಕರು ಗೆದ್ದಿರೋ ಕ್ಷೇತ್ರಗಳ ಪರಿಸ್ಥಿತಿ ಹೇಳೋ ಹಾಗಿಲ್ಲಾ. ನಾವು ಬಿಜೆಪಿಯಿಂದ ಗೆದ್ದಿರೋ ಶಾಸಕರು ಅಷ್ಟೆ, ಅಲ್ಲಾ, ಕಾಂಗ್ರೆಸ್ ನ ಶಾಸಕರು ಗೆದ್ದಿರೋ ಕ್ಷೇತ್ರದಲ್ಲೂ ಸಹ ಅನುದಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇವಲ ಗ್ಯಾರಂಟಿಗಳಿಗೆ ಹಣ ಹೊಂದಿಸೋದೇ ಆಗ್ತಿದೆ. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡ್ತಿಲ್ಲದ್ದು ಒಂದು ಕಡೆಯಾದ್ರೆ, ಮತ್ತೊಂದು ಕಡೆ DMF, KMERC ಹಣವೂ ನಮಗೆ ಬಿಡುಗಡೆ ಇಲ್ಲಾ. DMF ಅನುದಾನಕ್ಕೂ ಈ ಬಾರಿ ಬಳ್ಳಾರಿಯ ಕೆಲ ಶಾಸಕರು ವಿಜಯನಗರಕ್ಕೆ ಕೊಡಬಾರದು ಅಂತಿದ್ದಾರೆ. ನಮ್ಮ ಭಾಗದಲ್ಲಿ DMF ಹಣ ಬರುವಂತಹ ಮೈನಿಂಗ್ ಯಾವುದೂ ಕೂಡ ಇಲ್ಲಾ. ಕಳೆದ ಬಾರಿಯಾದರೂ DMF ಹಣ ಬಂದಿತ್ತು, ಆದ್ರೂ ಈ ಬಾರಿ ಹಣ ಬರೋದು ಡೌಟು ಎಂದು ಅಳಲು ತೋಡಿಕೊಂಡಿದ್ದಾರೆ.
ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?
ಮಳೆಗೆ ಧನ್ಯವಾದ ತಿಳಿಸಿದ ಸಚಿವ ಲಾಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ..!
‘ಕುಮಾರಸ್ವಾಮಿಯವರು ಇಲ್ಲಿ ಬರುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’




