Monday, December 23, 2024

Latest Posts

ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್‌ ಕ್ಷಮೆಯಾಚನೆಗೆ ಪಟ್ಟು

- Advertisement -

New Delhi Political News: ನವದೆಹಲಿ: “ದೇಶದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿ ಹಲವು ಪಕ್ಷಗಳ ನಾಯಕರು ನಿತೀಶ್‌ ಕುಮಾರ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕ್ಷಮೆಯಾಚಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ದೆಹಲ ಮಹಿಳಾ ಆಯೋಗ (DCW) ಪಟ್ಟು ಹಿಡಿದಿವೆ.

ಬಿಹಾರ ವಿಧಾನಸಭೆಯಲ್ಲಿ ನಿತೀಶ್‌ ಕುಮಾರ್‌ ಅವರು ನೀಡಿದ ಹೇಳಿಕೆಯು ಮಹಿಳೆಯರ ಘನತೆಗೆ ಧಕ್ಕೆ ತರುವಂತಿದೆ. ಪ್ರತಿಯೊಬ್ಬ ಮಹಿಳೆಯೂ ಗೌರವ ಸಿಗಬೇಕು. ಆದರೆ, ನಿತೀಶ್‌ ಕುಮಾರ್‌ ಅವರು ನೀಡಿದ ಹೇಳಿಕೆಯು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಹಾಗಾಗಿ, ನಿತೀಶ್‌ ಕುಮಾರ್‌ ಅವರು ದೇಶದ ಎಲ್ಲ ಹೆಣ್ಣುಮಕ್ಕಳ ಕ್ಷಮೆಯಾಚಿಸಬೇಕು” ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಒತ್ತಾಯಿಸಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೂಡ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

ನಿತೀಶ್‌ ಕುಮಾರ್ ಹೇಳಿದ್ದೇನು?

ಬಿಹಾರ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದ ಸಿಎಂ ನಿತೀಶ್ ಕುಮಾರ್ ಅವರು ಮಹಿಳೆ ಸುಶಿಕ್ಷಿತಳಾಗಿದ್ದರೆ ಹೇಗೆ ಜನನ ನಿಯಂತ್ರಣ ಸಾಧ್ಯವಾಗುತ್ತದೆ ಎಂಬುದನ್ನು ವಿವರಿಸುತ್ತಾ, ಮಹಿಳೆ ಒಂದೊಮ್ಮೆ ಜ್ಞಾನವಂತಳು, ಸುಶಿಕ್ಷಿತಳಾಗಿದ್ದರೆ ಗಂಡನ ಜತೆ ಮಿಲನಗೊಂಡಾಗಲೂ ತುಂಬ ಎಚ್ಚರವಾಗಿರುತ್ತಾಳೆ ಮತ್ತು ತಾನು ಗರ್ಭಿಣಿಯಾಗುವುದನ್ನು ತಪ್ಪಿಸುತ್ತಾಳೆ ಎಂದು ಹೇಳುತ್ತಾರೆ. ಆದರೆ, ಈ ವೇಳೆ ಬಳಸುವ ಕೈ ಸನ್ನೆಗಳು ಮತ್ತು ಭಾಷೆಯು ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ

ಸಿಎಂ ನಿತೀಶ್ ಕುಮಾರ್ ಅವರ ಮಾತುಗಳು ವೈರಲ್ ಆಗುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಡಿಸಿಎಂ ತೇಜಸ್ವಿ ಯಾದವ್ ಅವರು, ಸಿಎಂ ಅವರ ಮಾತುಗಳು ಅಶ್ಲೀಲವಲ್ಲ, ಅವು ಲೈಂಗಿಕ ಶಿಕ್ಷಣದ್ದಾಗಿವೆ ಎಂದು ಹೇಳಿಕೊಂಡಿದ್ದಾರೆ. ಸಿಎಂ ಮಾತುಗಳ ಕುರಿತು ನಾನು ಸ್ಪಷ್ಪಪಡಿಸಲು ಇಚ್ಛಿಸುತ್ತೇನೆ. ಮುಖ್ಯಮಂತ್ರಿಗಳು ಲೈಂಗಿಕ ಶಿಕ್ಷಣದ ಹೇಳಿದ್ದಾರೆ, ಜನರು ಈ ವಿಷಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಶಾಲೆಗಳಲ್ಲಿ ವಿಜ್ಞಾನ, ಜೀವಶಾಸ್ತ್ರದಲ್ಲಿ ಇವುಗಳನ್ನು ಕಲಿಸಲಾಗುತ್ತದೆ. ಮಕ್ಕಳು ಇದನ್ನು ಕಲಿಯುತ್ತಾರೆ. ಅವರು ಪ್ರಾಯೋಗಿಕವಾಗಿ ಏನು ಮಾಡಬೇಕೆಂದು ಹೇಳಿದರು. ಜನಸಂಖ್ಯೆಯನ್ನು ನಿಯಂತ್ರಿಸಿ, ಇದನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಳ್ಳಬಾರದು, ಆದರೆ ಲೈಂಗಿಕ ಶಿಕ್ಷಣ ಎಂದು ತೆಗೆದುಕೊಳ್ಳಬೇಕು ತೇಜಸ್ವಿ ಯಾದವ್ ಅವರು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ಫೋಟೋ ವೈರಲ್

ಹಾಸನಾಂಬೆಯ ದರ್ಶನ ಪಡೆದ ಸಿಎಂ: ಹೆಚ್ಡಿಕೆ, ಯತ್ನಾಳ್ ವಿರುದ್ಧ ವಾಗ್ದಾಳಿ

ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ

- Advertisement -

Latest Posts

Don't Miss