Hubballi News: ಹುಬ್ಬಳ್ಳಿ: ಇತ್ತಿಚಿನ ದಿನಗಳಲ್ಲಿ ಮತಾಂತರ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ, ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ, ಹಳ್ಳಿ ಹಳ್ಳಿಗಳಲ್ಲಿ ಮತಾಂತರ ಹೆಚ್ಚಾಗುತ್ತಿದೆ. ಕಳೆದ 2-3 ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಮುಸ್ಲಿಂ ಮತಾಂತರ ಮಾಡಿದ್ದಾರೆ. ಅಬ್ಬಾಸ್ ಎಂಬಾತನೇ ಮುಸ್ಲಿಂ ಮತಾಂತರ ಮಾಡಲಾಗಿದೆ. ಕುರುಬ ಸಮೂದಾಯದ ಯುವಕನನ್ನು ಮುಸ್ಲಿಂ ಸಮೂದಾಯಕ್ಕೆ ಮತಾಂತರ ಮಾಡಲಾಗಿದೆ. ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ವಾಸಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಇವರು ಮತಾಂತರ ನಿಷೇಧ ಕಾಯಿದೆಯನ್ನು ಗಾಳಿಗೆ ತೂರಿ ಮತಾಂತರ ಪ್ರಕ್ರಿಯೆಯಲ್ಲಿ ಕೆಲವು ದುಷ್ಟರು ತೊಡಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಂಘರ್ಷಕ್ಕೆ ಇಳಿಯುವ ಮಾನಸಿಕತೆಗೆ ತರುತ್ತದೆ ಎಂದರು.
ಸದ್ಯ ಮುಸ್ಲಿಂ, ಕ್ರೈಸ್ತ ಸಮೂದಾಯದ ಜನರು ರಾಜ್ಯದಲ್ಲಿ ತಮ್ಮದೇ ಸರ್ಕಾರ ಬಂದಿದೆ ಎಂಬಂತೆ ಸೊಕ್ಕಿನಿಂದ ವರ್ತನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಮತಾಂತರ ಮಾಡುವುದು ಅಪಾಯಕಾರಿ. ಇದು ನಿಲ್ಲಬೇಕು. ಇಲ್ಲದೇ ಹೋದಲ್ಲಿ ಸಂಘಟನೆಯಿಂದ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆಯೇ ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್ ತೆಗೆದುಕೊಳ್ಳುತ್ತೇವೆ ಎಂದು ಉದ್ದಟತನದ ಮಾತುಗಳನ್ನು ಹೇಳಿತ್ತು. ಅವರು ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಹೋಗಿ ದೇಶವನ್ನು ಹಾಳು ಮಾಡತ್ತಾರೆ. ಸಿದ್ದರಾಮಯ್ಯ ಅವರಿಗೆ ಕುರುಬರ ಮತಗಳು ಬೇಕು ಆದರೆ ಅವರ ರಕ್ಷಣೆ ಅವರಿಗೆ ಬೇಡವಾಗಿದೆ. ಮುಂದಿನ ದಿನಗಳಲ್ಲಿ ಜನರು ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಪ್ರಮೋದ್ ಮುತಾಲಿಕ್ ಹರಿಹಾಯ್ದರು.
ಮೋದಿ ಪರ ನಿಂತ ಅಹಿಂಸಾ ಚೇತನ್! ಸಂತೋಷ್ ಲಾಡ್ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ
ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮುಲ್ಲಾ ಬಂಧನ
ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್ ಕ್ಷಮೆಯಾಚನೆಗೆ ಪಟ್ಟು



