Friday, December 5, 2025

Latest Posts

‘ಕಾಂಗ್ರೆಸ್‌ನಲ್ಲಿ ಮೊದಲು ಎರಡು ಬಾಗಿಲಿತ್ತು. ಇದೀಗ ನಾಲ್ಕು ಬಾಗಿಲಾಗಿವೆ’

- Advertisement -

Hubballi Political News: ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ,  ಆಪರೇಶನ್ ಹಸ್ತದಲ್ಲಿಯೇ ಆಪರೇಶನ್ ಹಸ್ತ ಮಾಡೋ ಟೀಮ್ ರೆಡಿಯಾಗಿದೆ. ಕಾಂಗ್ರೆಸ್ ಈ ಟೀಮ್ ರೆಡಿ ಮಾಡಿಕೊಂಡಿದೆ ಎಂದು ಟೆಂಗಿನಕಾಯಿ ಆರೋಪಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಮೊದಲು ಎರಡು ಬಾಗಿಲಿತ್ತು. ಇದೀಗ ನಾಲ್ಕು ಬಾಗಿಲಾಗಿವೆ. ಇದರಲ್ಲಿ ಬಿಜೆಪಿ ಇನ್ವಾಲ್ ಮೆಂಟ್ ಇಲ್ಲ. ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದೆ. ದುರ್ದೈವ ಅಂದ್ರೆ ಕಾಂಗ್ರೆಸ್ ‌ನ ಎಚ್ ಕೆ ಪಾಟೀಲ್ ಅವರನ್ನ ಯಾವ ಮನೆಗೆ ಊಟಕ್ಕೂ ಕರೆದಿಲ್ಲ,ಟಿಫಿನ್ ಮಾಡೋಕು ಕರೆದಿಲ್ಲ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ಸಿದ್ದರಾಮಯ್ಯ ಕರಿಲಿಲ್ಲ, ಡಿಕೆ ಶಿವಕುಮಾರ್ ಕರದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ ಬಣಗಳಾಗಿವೆ. ಇತ್ತ ನಾನು ಮುಖ್ಯಮಂತ್ರಿ ಆಗಬೇಕು ಎಂದು ಸತೀಶ್ ಜಾರಕಿಹೊಳಿ‌ ಓಡಾಡ್ತೀದಾರೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದೆ ಬಗ್ಗೆ ಬಹಳ ಚರ್ಚೆ ನಡೀತಿದೆ. ನಾವೇನು ಮಾಡಲ್ಲ, ಫೆಬ್ರವರಿ, ಮಾರ್ಚವರೆಗೂ ನೋಡಿ ಏನೇನಾಗತ್ತೆ ಎಂದು ಟೆಂಗಿನಕಾಯಿ ಸವಾಲ್ ಹಾಕಿದ್ದಾರೆ. ಯಾವುದೇ ಆಪರೇಶನ್ ಕಮಲ ಬಿಜೆಪಿ‌ ಮಾಡಲ್ಲ. ಬಿಜೆಪಿಯ ಯಾವೊಬ್ಬ ಶಾಸಕರು ಕಾಂಗ್ರೆಸ್ ಗೆ ಹೋಗಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಮತಾಂತರ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು,  ಮುಖ್ಯಮಂತ್ರಿಗಳ ಸಮುದಾಯದ ಜನ ಇವತ್ತು ಮತಾಂತರ ಆಗಿದ್ದಾರೆ. ಹಾಗಾದ್ರೆ ಮುಖ್ಯಮಂತ್ರಿಗಳೇ ಮತಾಂತರಕ್ಕೆ ಪ್ರೋತ್ಸಾಹ ಮಾಡ್ತೀರಾ..? ವಿರೋಧ ಮಾಡ್ತೀರಾ ..? ಅನ್ನೋದನ್ನ ಮುಖ್ಯಮಂತ್ರಿ ಹೇಳಬೇಕು. ಇದೇ ಕಾರಣಕ್ಕೆ ಮತಾಂತರ ಕಾಯ್ದೆ ಜಾರಿ ಮಾಡಿದ್ದು. ಸಮುದಾಯದ ಜನ ಸಿದ್ದರಾಮಯ್ಯ ಉಳಸಕೋತಾರೋ ಬಿಟ್ಟಕೊಡತಾರೋ ನೋಡೋಣ ಎಂದಿದ್ದು, ಜೆಡಿಎಸ್ ರೆಸಾರ್ಟ್ ವಿಚಾರ ನನಗೆ ಸಂಬಂಧಿಸಿದ್ದಲ್ಲ ಎಂದು ಟೆಂಗಿನಕಾಯಿ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಪರ ನಿಂತ ಅಹಿಂಸಾ ಚೇತನ್‌! ಸಂತೋಷ್‌ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ

ಅರ್ಚಕರು, ಸಂತರು ಅತ್ಯಾಚಾರಿಗಳು ಎಂದ ಕಾಂಗ್ರೆಸ್‌ ಶಾಸಕ ಅಫ್ತಾಬುದ್ದೀನ್‌ ಮುಲ್ಲಾ ಬಂಧನ

ಸ್ತ್ರೀಯರು ಕಲಿತರೆ ಜನಸಂಖ್ಯೆ ನಿಯಂತ್ರಣ: ನಿತೀಶ್‌ ಕ್ಷಮೆಯಾಚನೆಗೆ ಪಟ್ಟು

- Advertisement -

Latest Posts

Don't Miss