ಹಾಸನದಲ್ಲಿ ಎರಡು ಕಡೆ ಲೋಕಾ ದಾಳಿ: ಬಲೆಗೆ ಬಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

Hassan News: ಹಾಸನ: ಹಾಸನದ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಮೇಲೆ‌ ಲೋಕಾಯುಕ್ತ ದಾಳಿ ನಡೆಸಿದ್ದು, ಇಲ್ಲಿನ ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ.

ಲಂಚ ಆರೋಪ ಹಿನ್ನೆಲೆ, ಹಾಸನದ ಕೆ.ಆರ್.ಪುರಂನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮೇಲೆ, ಬೆಂಗಳೂರು ಮತ್ತು ಹಾಸನ ಲೋಕಾಯುಕ್ತ ಅಧಿಕಾರಿಗಳಿಂದ ಈ ದಾಳಿ ನಡೆದಿದೆ.  ಬೆಂಗಳೂರು ಲೋಕಾಯುಕ್ತ ಎಸ್ಪಿ ಪವನ್ ನಜ್ಜೂರು ನೇತೃತ್ವದಲ್ಲಿ ‌ದಾಖಲಾತಿ ಪರಿಶೀಲನೆ ನಡೆಸಲಾಗಿದೆ.

ಇನ್ನೊಂದೆಡೆ ಹಾಸನದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.  ಫಣೀಂದ್ರ.ಎನ್.ಎಸ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಕಾಯಿಮಟ್ಟೆ ಶೇಖರಣಾ ಘಟಕ ಮಾಡಲು 1 ಲಕ್ಷ 77 ಸಾವಿರ ಸಬ್ಸಿಡಿ ನೀಡಲು, ಫಣೀಂದ್ರ ರೈತನ ಬಳಿ ಲಂಚ ಕೇಳಿದ್ದರು.

ಚನ್ನರಾಯಪಟ್ಟಣ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಫಣೀಂದ್ರ.ಎನ್.ಎಸ್., ರೈತನಿಗೆ ಸಬ್ಸೀಡಿ ನೀಡುವ ಸಲುವಾಗಿ, 6 ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಲಂಚ ಪಡೆಯುತ್ತಿದ್ದ ವೇಳೆ, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ದಾಳಿ ಮಾಡಿದ್ದಾರೆ.

ಎಣ್ಣೆ’ ಹೊಡೆದಿದ್ದ ಇಲಿಯನ್ನು ಬಂಧಿಸಿದ ಪೊಲೀಸರು! ಅಚ್ಚರಿ ಎನಿಸಿದರೂ ಇದು ಸತ್ಯ!

ನಂ.1 ಬ್ಯಾಟರ್ ಶುಭಮನ್ಗೆ ಲವ್ಲಿಯಾಗಿ ಅಭಿನಂದಿಸಿದ ಸಾರಾ ತೆಂಡೂಲ್ಕರ್

‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘

About The Author