Dharwad Political News: ಧಾರವಾಡ: ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಆರೋಪ ಮಾಡಿದ್ದರ ಕುರಿತು, ಧಾರವಾಡದಲ್ಲಿ ಶಾಸಕ ಬಿ.ಆರ್.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಮೂರು ಜನರಲ್ಲ, ಅನೇಕ ಜನ ಸೇರಿ ಪತ್ರ ಬರೆದಿದ್ವಿ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತಾ ಪತ್ರದಲ್ಲಿತ್ತು. ಅದರಲ್ಲಿ ಅಸಮಾಧನ, ಅತೃಪ್ತಿ ಇರಲಿಲ್ಲ. ಆದರೆ ಹಳೇ ದಿನಾಂಕದ ಲೆಟರ್ ಹೆಡ್ ದುರುಪಯೋಗ ಮಾಡಿಕೊಂಡಿದ್ದಾರೆ. ತಮಗೆ ಬೇಕಾದಂತೆ ಬರೆದುಕೊಂಡು ವೈರಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಅಭಿವೃದ್ಧಿ ಕೆಲಸ ವಿಳಂಬ ವಿಚಾರದ ಬಗ್ಗೆ ಪಾಟೀಲರು ಪ್ರತಿಕ್ರಿಯೆ ನೀಡಿದ್ದು, ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇದೆ. ಈ ವರ್ಷ ಗ್ಯಾರಂಟಿಗೆ 56 ಸಾವಿರ ಕೋಟಿ ಬೇಕು. ಸಿಎಂ ಅವರೇ ಇದನ್ನು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ದುಡ್ಡು ಸಿಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಲಿಂಗಾಯತರ ಕಡೆಗಣನೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಯಡಿಯೂರಪ್ಪ ಪರಿಸ್ಥಿತಿ ಏನಾಗಿದೆ? ಕಾರಜೋಳ ಹಾಗೇ ಹೇಳತಾ ಇರ್ತಾರೆ. ಕಾಂಗ್ರೆಸ್ ನಲ್ಲಿ ಲಿಂಗಾಯತರು ಗಟ್ಟಿಯಾಗಿದ್ದೇವೆ. ನಮ್ಮಲ್ಲಿ ಎಲ್ಲರನ್ನೂ ಸಿಎಂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು, 2ಎ ಹೋರಾಟ ಬಹಳ ದಿನಗಳಿಂದ ನಡೆದಿದೆ. ಸರ್ಕಾರ ಏನು ಮಾಡುತ್ತದೆ ನೋಡಬೇಕು. ನಮ್ಮಲ್ಲಿ ಎರಡ್ಮೂರು ಬೇಡಿಕೆಗಳಿವೆ. ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಸೇರಿಸಬೇಕೆಂಬ ಬೇಡಿಕೆ ಇದೆ. ನಿಗಮ ಮಾಡಬೇಕೆಂಬ ಬೇಡಿಕೆ ಇತ್ತು. ಈಗ ನಿಗಮ ಆಗಿದೆ. ಮೀಸಲಾತಿ ಕೇಳುವುದು ತಪ್ಪಲ್ಲ. ಎಲ್ಲ ಸಮಾಜ ಈಗ ಸ್ವಾಭಾನದಿಂದ ಇದೆ ಎಂದಿದ್ದಾರೆ.
ಮುಂದೆ ಸಿಎಂ ಬದಲಾಗುತ್ತಾರೆಂಬ ಬಗ್ಗೆ ಮಾತನಾಡಿದ ಶಾಸಕರು, ಸದ್ಯ ಸಿದ್ದರಾಮಯ್ಯ ಸಿಎಂ ಇದಾರೆ. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಶಾಮನೂರ ಶಿವಶಂಕರಪ್ಪ ನಮ್ಮ ಹಿರಿಯರು. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಆ ಅಭಿಪ್ರಾಯ ಪಕ್ಷ ಹೇಗೆ ತೆಗೆದುಕೊಳ್ಳುತ್ತದೆ ನೋಡಬೇಕು ಎಂದಿದ್ದಾರೆ.
‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘
ಸತೀಶ್ ಜಾರಕಿಹೊಳಿ-ಡಿಕೆ ಸುರೇಶ್ ಮಹತ್ವದ ಭೇಟಿ! ಮಾತುಕತೆ ಬಳಿಕ ಡಿಕೆ ಬ್ರದರ್ ಅಂದಿದ್ದೇನು ಗೊತ್ತಾ?