Kalaburagi News: ಕಲಬುರಗಿ: ಆರ್.ಡಿ.ಪಾಟೀಲ್‌ಗೆ ರಕ್ಷಣೆ ನೀಡಿದ ಆರೋಪದ ಮೇಲೆ ಇನ್ನು ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಪಾಟೀಲ್‌ಗೆ ಅಪಾರ್ಟಮೆಂಟ್ ಫ್ಲ್ಯಾಟನ್ನು ಬಾಡಿಗೆಗೆ ನೀಡಿದ್ದರು. ಅಪಾರ್ಟ್ಮೆಂಟ್ ನ ವ್ಯವಸ್ಥಾಪಕ ದಿಲೀಪ್ ಪವಾರ್, ಅಪಾರ್ಟ್‌ಮೆಂಟ್ ಫ್ಲ್ಯಾಟ್ ಬಾಡಿಗೆಗೆ ನೀಡಿದ ಶಹಾಪೂರದ ಶಂಕರ್ ಗೌಡ ಯಾಳವಾರ್ ಎಂಬುವವರು ಬಂಧಿತ ಆರೋಪಿಗಳು. ಪಾಟೀಲ್‌ನಿಂದ 10 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದಿದ್ದ, ಅಪಾರ್ಟ್‌ಮೆಂಟ್ ವ್ಯವಸ್ಥಾಪಕ ದಿಲೀಪ್, ಫ್ಲ್ಯಾಟ್ ಮಾಲೀಕ ಶಂಕರ್‌ಗೌಡಗೆ ನೀಡಿದ್ದ.
ಆರ್.ಡಿ.ಪಾಟೀಲ್ ಕೆಇಎ ಪರೀಕ್ಷೆ ಅಕ್ರಮ ಹಗರಣದ ಕಿಂಗ್‌ಪಿನ್ ಆಗಿದ್ದ. ಇವನು ಈ ಆರೋಪಿಗಳು ಬಾಡಿಗೆ ಕೊಟ್ಟಿದ್ದ, ಕಲಬುರಗಿಯ ವರದಾ ಲೈಔಟ್‌ನಲ್ಲಿರುವ ಮಹಾಲಕ್ಷ್ಮೀ ಅಪಾರ್ಟ್‌ಮೆಂಟ್‌ನಿಂದಲೇ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಿ ಹೋಗಿದ್ದ. ಹಾಗಾಗಿ ಆತನಿಗೆ ಬಾಡಿಗೆ ನೀಡಿದ ತಪ್ಪಿಗೆ, ಇವರಿಬ್ಬರನ್ನು ಪೊಲೀರು ಅರೆಸ್ಟ್ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆಶಿಯವರನ್ನು ಯಾಕೆ ಭೇಟಿಯಾಗಿದ್ದು ಗೊತ್ತಾ..?
ಸತೀಶ್ ಜಾರಕಿಹೊಳಿ-ಡಿಕೆ ಸುರೇಶ್ ಮಹತ್ವದ ಭೇಟಿ! ಮಾತುಕತೆ ಬಳಿಕ ಡಿಕೆ ಬ್ರದರ್ ಅಂದಿದ್ದೇನು ಗೊತ್ತಾ?
‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘