Hassan News: ಹಾಸನ:ಹಾಸನಾಂಬೆಯ ದರ್ಶನಕ್ಕೆ ಬಂದ ಭಕ್ತರಲ್ಲಿ ಕೆಲವರಿಗೆ ವಿದ್ಯುತ್ ಶಾಕ್ ತಗುಲಿ, ಕುಸಿದು ಬಿದ್ದರೆ, ಇನ್ನುಳಿದವರಲ್ಲಿ ನೂಕು ನುಗ್ಗಲಾಗಿದೆ.
20 ರಿಂದ 25 ಅಧಿಕ ಭಕ್ತಾದಿಗಳಿಗೆ ವಿದ್ಯುತ್ ಶಾಕ್ ತಗುಲಿದ್ದು, ಭಕ್ತಾದಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ. ಆಕೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಜಿಲ್ಲಾಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಶಿವಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ ಹಾಸನಾಂಬೆಯ ದೇವಾಲಯದ ಬಳಿ ಶಾಕ್ ಹೊಡೆಯುತ್ತಿದೆ ಎಂಬ ಸುದ್ದಿ ಕೇಳಿ, ಜನ ಕಂಗಾಲಾಗಿ ಓಡಲು ಆರಂಭಿಸಿದ್ದು, ಧಿಡೀರ್ ನೂಕುನುಗ್ಗಲಾಗಿತ್ತು. ಧರ್ಮದರ್ಶನದ ಸರತಿ ಸಾಲಿನಲ್ಲಿ ಶಾಕ್ ಹೊಡೆಸಿಕೊಂಡ ಕೆಲ ಮಹಿಳೆಯರು ನರಳಾಡುತ್ತಿದ್ದರೆ, ಇನ್ನು ಕೆಲವರು ಒಬ್ಬರ ಮೇಲೆ ಒಬ್ಬರು ಬೀಳುವಂತೆ ಓಡಲು ಆರಂಭಿಸಿದ್ದಾರೆ.
ವಿಶ್ವಕಪ್ನಲ್ಲಿ ಮೊಮ್ಮಗನ ಬೊಂಬಾಟ್ ಆಟ! ರಚಿನ್ಗೆ ದೃಷ್ಟಿ ತೆಗೆದ ಅಜ್ಜಿ…!