- Advertisement -
Hassan News: ಹಾಸನದಲ್ಲಿ ಹಾಸನಾಂಬೆಯ ದರ್ಶನಕ್ಕೆ ಬಂದ ಭಕ್ತಾದಿಗಳಲ್ಲಿ ಕೆಲವರಿಗೆ ಶಾಕ್ ಹೊಡೆದಿದ್ದು, ಇನ್ನು ಕೆಲವರು ನೂಕುನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಹಾಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಇವರಿಗೆ ಶಾಸಕ ಶಿವಲಿಂಗೇಗೌಡ ಕೂಡ ಸಾಥ್ ನೀಡಿದ್ದು, ಐಸಿಯುನಲ್ಲಿದ್ದ ಬಾಲಕಿಗೆ ಸಚಿವರು ಧೈರ್ಯ ತುಂಬಿದ್ದಾರೆ. ಇನ್ನು ಈ ಬಳಿಕ ವಿಶೇಷವಾಗಿ ಹಾಸನಾಂಬ ದರ್ಶನ ಮಾಡಿಸುವಂತೆ ಶಾಸಕ ಸ್ವರೂಪ್ ಪ್ರಕಾಶ್‌ಗೆ ಮನವಿ ಮಾಡಿದರು.
ಹಾಸನಾಂಬೆಯ ದರ್ಶನದ ವೇಳೆ ಶಾಕ್ ಹೊಡೆದು ಯುವತಿಯ ಸ್ಥಿತಿ ಗಂಭೀರ: ಹಲವರು ಆಸ್ಪತ್ರೆಗೆ ದಾಖಲು
- Advertisement -