International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ 35 ದಿನ ಕಳೆದಿದೆ. ಆದರೂ ಯಾರೂ ದಾಳಿ ನಿಲ್ಲಿಸಿ, ಶಾಂತಿ ಮಾತುಕತೆಗೆ ಮುಂದಾಗಿಲ್ಲ. ಇನ್ನು ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮಾಡಿದ್ದು, ಅವರ ರಾಕೇಟ್ ಧ್ವಂಸ ಮಾಡಲಾಗಿದೆ. ಹಮಾಸ್‌ನ ಕಮಾಂಡರ್ ಸೇರಿ, ಹಲವು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕರ ಕಮಾಂಡರ್, ಅಹಮದ್ ಮೂಸಾ ಮತ್ತು ಇನ್ನೋರ್ವ ಕಮಾಂಡರ್ ಓಮರ್ ಸಾವನ್ನಪ್ಪಿದ್ದಾರೆ. ಇವರನ್ನು ಬಿಟ್ಟು 20 ಜನ ಉಗ್ರರನ್ನು ಇಸ್ರೇಲ್ ಸೇನೆ ಕೊಂದು ಹಾಕಿದೆ. ರಾತ್ರಿಯಿಡೀ ಈ ದಾಳಿ ನಡೆದಿದ್ದು, ಹಮಾಸ್ ಉಗ್ರರನ್ನು ಪೂರ್ತಿಯಾಗಿ ಮುಗಿಸುವವರೆಗೂ, ಯುದ್ಧ ನಿಲ್ಲಿಸುವುದಿಲ್ಲವೆಂದು ಇಸ್ರೇಲ್ ಪಣ ತೊಟ್ಟಿದೆ.
ಇಷ್ಟೇ ಅಲ್ಲದೇ, ಹಮಾಸ್‌ಗೆ ಸೇರಿದ 20 ರಾಕೇಟ್ ಲಾಂಚರ್‌ಗಳನ್ನು ಒಳಗೊಂಡಿರುವ ಕಂಟೇನರ್‌ಗಳನ್ನು ಇಸ್ರೇಲ್ ಧ್ವಂಸ ಮಾಡಿದೆ. ಈ ರಾಕೇಟ್ ಲಾಂಚರ್‌ಗಳು ಇಸ್ರೇಲ್‌ಗೆ ಸೇರಿದ್ದಾಗಿದ್ದು, ಇವುಗಳನ್ನು ಹಮಾಸ್ ಉಗ್ರರು ವಸತಿ ಕಟ್ಟಡಗಳ ಬಳಿ ಬಚ್ಚಿಟ್ಟಿದ್ದರು. ಇದರಲ್ಲಿ ಕೆಲ ರಾಕೇಟ್ ಲಾಂಚರ್‌ಗಳನ್ನು ಇಸ್ರೇಲಿಗರು ವಶಪಡಿಸಿಕೊಂಡಿದ್ದು, ಇನ್ನು ಕೆಲವನ್ನು ನಾಶಪಡಿಸಲಾಗಿದೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದು, ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ಕೂಡ ಗಾಜಾದಲ್ಲಿದ್ದ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಿದ್ದು, ಇವರಿಬ್ಬರ ನಡುವಿನ ಯುದ್ಧದ ದಾಳಿಯಲ್ಲಿ 11 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತೇನಿಗರು ಕೊಲ್ಲಲ್ಪಟ್ಟರು.
ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ
ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ