Dharwad News: ಧಾರವಾಡ: ಕಾಂಗ್ರೆಸ್ ಯುವ ಮುಖಂಡ ಸೇರಿದಂತೆ ಹನ್ನೆರಡು ಜನರನ್ನ ಅಂದರ್-ಬಾಹರ್ ಆಡುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿ ಮಾಡಿ ಬಂಧನ ಮಾಡಿರುವ ಪ್ರಕರಣ ಕಳೆದ ರಾತ್ರಿ ನಡೆದಿದೆ.
ಧಾರವಾಡದ ಲಕ್ಷ್ಮೀ ಥೇಟರ್ ಬಳಿಯಿರುವ ಗ್ಯಾಲಕ್ಸಿ ಗ್ರ್ಯಾಂಡ್ ಪಕ್ಕದಲ್ಲಿರುವ ಪೈನಾನ್ಸ್ ಕಚೇರಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ರಾಹುಲ ಅಷ್ಟಗಿ ಸೇರಿ 12 ಆರೋಪಿತರನ್ನ ಬಂಧನ ಮಾಡಲಾಗಿದೆ.
ಆರೋಪಿತರಿಂದ ಒಂದು ಲಕ್ಷ ರೂಪಾಯಿಗೂ ಹೆಚ್ಚು ನಗದು ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಧಾರವಾಡದ ಹೊರವಲಯದ ರಮ್ಯ ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಕೂಡಾ, ಜೂಜಾಟದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ರಾಹುಲ ಕೂಡಾ ಅಷ್ಟಗಿ ಅವರ ಸಂಬಂಧಿಯಾಗಿದ್ದಾನೆ.
ಗ್ಯಾಲಕ್ಸಿ ಗ್ರ್ಯಾಂಡ್‌ನ ರೇಡ್ ಹಿಂದಿನ ಅಸಲಿ ಕಹಾನಿಯ ರೋಚಕತೆ ನಿಮ್ಮ ಮುಂದೆ ಕೆಲವೇ ಸಮಯದಲ್ಲಿ.. ನಿರೀಕ್ಷಿಸಿ..
1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್ ಹತ್ಯೆ..
3 ಲಕ್ಷ ರೂ. ಟೀ ಕಪ್‌ನೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ ನೀತಾ ಅಂಬಾನಿ