Tuesday, October 14, 2025

Latest Posts

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

- Advertisement -

International News: ಇಸ್ರೇಲ್- ಹಮಾಸ್ ಯುದ್ಧ ಹಿನ್ನೆಲೆ ಮಿಡಲ್ ಈಸ್ಟ್‌ನಲ್ಲಿ ಉದ್ವಿಗ್ನತೆ ಇರುವ ಕಾರಣಕ್ಕೆ, ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರುವುದು ಕಂಡು ಬಂದಿದೆ.

ಸೈಟ್- 512 ಎಂಬ ಹೆಸರಿನ ಈ ಸೇನಾ ನೆಲೆ, ರಾಡಾರ್ ಫೆಸಿಲಿಟಿಯನ್ನು ಹೊಂದಿದೆ. ಇಸ್ರೇಲ್ ಮೇಲೆ ಹಾರಿ ಬರುವ ಮಿಸೈಲ್‌ಗಳನ್ನು ಪತ್ತೆ ಮಾಡುವುದು ಇದರ ಕೆಲಸ. ಆದರೆ ಇದು ಕೇವಲ ಇರಾನ್ ಕಡೆಯಿಂದ, ಇಸ್ರೇಲ್ ಮೇಲೆ ಆಗುವ ಮಿಸೈಲ್ ದಾಳಿಯನ್ನು ಮಾತ್ರ ಪತ್ತೆ ಹಚ್ಚುತ್ತದೆ. ಗಾಜಾ ಕಡೆಯಿಂದ ಬರುವ ಮಿಸೈಲ್ ಬಗ್ಗೆ ಇದು ಮಾಹಿತಿ ನೀಡುವುದಿಲ್ಲ.

ಈ ಕಾರಣಕ್ಕಾಗಿಯೇ ಹಮಾಸ್ ಉಗ್ರರು ಗಾಜಾದ ಮೇಲೆ ದಾಳಿ ಮಾಡಿದಾಗ, ಈ ಬಗ್ಗೆ ಇಸ್ರೇಲ್ ಸೇನೆಗೆ ಮುನ್ಸೂಚನೆ ಸ್ಕಿಕ್ಕಿರಲಿಲ್ಲ. ಹಾಗಾಗಿ ಈಗ ಈ ಭಾಗದಲ್ಲೂ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುವುದಕ್ಕೆ ನಿರ್ಧರಿಸಲಾಗಿದೆ. ಯುದ್ಧ ಶುರುವಾದ ಎರಡೇ ವಾರಗಳಲ್ಲಿ , ಇರಾನ್ ಬೆಂಬಲಿತ ಉಗ್ರ ಸಂಘಟನೆ ಸೇರಿ, ಇನ್ನು ಕೆಲವು ಶತ್ರು ದೇಶಗಳ ಮೇಲೆ ಕಣ್ಣಿಡಲು, ಅಮೆರಿಕ ಸೇನೆ ಮುಂದಾಗಿದೆ.

ತನ್ನ ದೇಶವನ್ನು ರಕ್ಷಿಸಿಕೊಳ್ಳಲು, ಶತ್ರುಗಳ ನಾಶಕ್ಕಾಗಿ ಫೈಟರ್ ಜೆಟ್‌ಗಳ ಸಂಖ್ಯೆ ಕೂಡ ಹೆಚ್ಚಿಸಲಾಗಿದೆ. 2 ಏರ್‌ಕ್ರಾಫ್ಟ್ ಕೇರಿಯರ್‌ಗಳನ್ನು ನಿಯೋಜಿಸಿದೆ. ಇಸ್ರೇಲ್ ಗೆ ಬೆಂಬಲಿಸುತ್ತಿರುವ ಅಮೆರಿಕಾ, ಗುಪ್ತಚರ ಅಧಿಕಾರಿಗಳ ನಿಯೋಜನೆಗೆ ಬೇಕಾದ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದೆ ಎಂಬ ಮಾಹಿತಿ ಇದೆ.

1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್‌ ಹತ್ಯೆ..

ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ..

ಗಾಜಾದ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿದ ಉಗ್ರರು: ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನೆ

- Advertisement -

Latest Posts

Don't Miss