ರಜತ್ ಉಳ್ಳಾಗಡ್ಡಿಮಠಗೆ ಟಿಕೆಟ್ ನೀಡುವಂತೆ NSIU, ದಲಿತ ಸಂಘಟನೆ ಮನವಿ

Political News: ಧಾರವಾಡ : ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠಗೆ ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ನೀಡಬೇಕು ಎಂದು ಜಿಲ್ಲಾ NSIU ಸಂಘದ ಪದಾಧಿಾರಿಗಳು ಹಾಗೂ ಕರ್ನಾಟಕ ಬೀಮಸೇನೆ ಸಂಘಟನೆ ಮುಖಂಡರು ಇಂದು ಧಾರವಾಡದಲ್ಲಿ, ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ನೀಡಿದ್ದಾರೆ .

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸಿದ ವೇಳೆ ರಜತ್ ಉಳ್ಳಾಗಡ್ಡಿ ಮಠ ಅವರಿಗೆ ಜೈಕಾರ ಹಾಕಿದರು. ಕಾರ್ಯಕರ್ತರು, ವಿಶೇಷವಾಗಿ ಮನವಿ ಸಲ್ಲಿಸಿದ್ದು ತಮ್ಮ ಮನವಿ ಯನ್ನು ಹೈ ಕಮಾಂಡ್ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪರ್ಧಿಸಿದ್ದು, ಈ ಹಿಂದೆ ಶಾಸಕ ವಿನಯ್ ಕುಲಕರ್ಣಿ ಸ್ಪರ್ಧಿಸಿ ಪರಾಭವಗೊಂಡಿದ್ದರು.ಇನ್ನು ಡಿಸಿಎಂ ಡಿ ಕೆ ಶಿವಕುಮಾರ್ ಹುಬ್ಬಳ್ಳಿಗೆ ಬೇಟಿ ನೀಡಿದ ವೇಳೆ ಕೂಡ ಈ ಬಾರಿ ಯುವಕರಿಗೆ ,ವಾಕ್ ಚಾತುರ್ಯ ಇರುವರಿಗೆ, ಸಂಘಟನಕರಾರಿಗೆ ಟಿಕೆಟ್ ನೀಡುವುದಾಗಿ ಹೇಳಿಕೆ ನೀಡಿದ್ದು ಧಾರವಾಡ ಜಿಲ್ಲೆಯ ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ತುಂಬಿದೆ.

ಈ ಹಿನ್ನಲೆಯಲ್ಲಿ ಉತ್ಸಾಹದಲ್ಲಿ ಇರುವ ಕಾರ್ಯಕರ್ತರು ಇಂದು ಮನವಿ ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ರಜತ್ ಉಳ್ಳಾಗಡ್ಡಿ ಮಠ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಕೆಲಸದಿಂದ ತೆಗದಿದ್ದಕ್ಕೆ ಬೆಂಗಳೂರು ಕಂಪನಿಯೊಂದಕ್ಕೆ ಬಾಂಬ್ ಬೆದರಿಕೆ ಹಾಕಿದ ಯುವತಿ

ಬಿಗ್ ಬಾಸ್ನಲ್ಲಿ ಜೋಡಿ ಆಗಿದ್ದೂ ಇವರೇ, ಕೇಸ್ ಹಾಕಿಸಿಕೊಂಡಿದ್ದೂ ಇವರೇ, ಎಂಥ ಕಾಕತಾಳೀಯ

ಕಿಂಗ್ ಕೊಹ್ಲಿ 50ನೇ ಶತಕ ಸಿಡಿಸಿದ್ದಕ್ಕೆ ಕ್ರಿಕೇಟ್ ದೇವರು ಹೇಳಿದ್ದೇನು..?

About The Author