Tumakuru News: ತುಮಕೂರು: ಬುಧವಾರ ಟೀಂ ಇಂಡಿಯಾ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಸೆಮಿ ಫೈನಲ್ ಕ್ರಿಕೆಟ್ ಪಂದ್ಯ ನಡೆದಿದ್ದು, 70 ರನ್‌ಗಳ ಅಂತರದಲ್ಲಿ ಭಾರತ ಭರ್ಜರಿ ಜಯ ಗಳಿಸಿ ವಿಶ್ವಕಪ್ (World Cup) ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ನಡುವೆ ತುಮಕೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ತಮ್ಮ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಇಂಡೋ-ಕಿವೀಸ್ ಸೆಮಿ ಫೈನಲ್ ಮ್ಯಾಚ್ ಹಾಕಿಸಿ ಸುದ್ದಿಯಾಗಿದ್ದಾರೆ.
ಪಾವಗಡದ (Pavagada) ಎಸ್‌ಎಸ್‌ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೆಟ್ ಪ್ರೇಮಿಗಳಾದ ಸೌಂದರ್ಯ ಹಾಗೂ ಕಾರ್ತಿಕ್ ಸೆಮಿ ಫೈನಲ್ ದಿನವೇ ತಮ್ಮ ಮದುವೆ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲೇ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ವಧು ಹಾಗೂ ವರ ಮದುವೆ ಮಂಟಪದಲ್ಲಿ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಿದ್ದು, ಆರತಕ್ಷತೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಇಡಿ (LED) ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮದುವೆಗೆಂದು ಬಂದವರಿಗೆ ಆರ್ಕೆಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಇಡಿ ವ್ಯವಸ್ಥೆ ಕಲ್ಪಿಸಿದ್ದು, ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದೊಂದಿಗೆ ಪಂದ್ಯ ವೀಕ್ಷಣೆಯ ಭಾಗ್ಯ ಲಭಿಸಿದೆ. ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿದೆ.
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ: ಹೆಚ್.ಡಿ.ಕುಮಾರಸ್ವಾಮಿ
ನಮ್ಮ ಹುಡುಗರ ಆಟವು ಚಂದ, ಗೆಲವಿನ ಹಠವೂ ಬಲು ಚಂದ: ಕ್ರಿಕೇಟ್ ತಂಡಕ್ಕೆ ಅಭಿನಂದಿಸಿದ ಡಿಕೆಶಿ
ಧಾರವಾಡದಲ್ಲಿ ಬಿಜೆಪಿ ಭಿನ್ನಮತ, ಆಹ್ವಾನವಿದ್ದರೂ ಕಾರ್ಯಕ್ರಮಕ್ಕೆ ಗೈರಾದ ನಾಯಕರು