Friday, June 20, 2025

Latest Posts

ಫೇಸ್ಬುಕ್ ಜಾಹೀರಾತಿಗಾಗಿ 7ದಿನಕ್ಕೆ 26 ಲಕ್ಷ ಖರ್ಚು ಮಾಡಿದ ಕಾಂಗ್ರೆಸ್! ಬಿಜೆಪಿಯಿಂದಲೂ ಲಕ್ಷ ಲಕ್ಷ ಖರ್ಚು!

- Advertisement -

Political News: ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ (BJP Congress) ಸೇರಿ ಹಲವು ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಭಾರೀ ಕಸರತ್ತು ನಡೆಸುತ್ತಿವೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆ ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಿದೆ, ಧ್ವನಿವರ್ಧಕಗಳು ಕೂಡ ಮೌನವಾಗಿವೆ. ಇದರ ಹೊರತಾಗಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪ್ರಚಾರಕ್ಕೆ ಆನ್ಲೈನ್ ಮೊರೆ ಹೋಗಿವೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಪ್ರಚಾರ ಮುಂದುವರಿಸಿವೆ.

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಹೆಚ್ಚು ಖರ್ಚು
ರಾಜ್ಯಗಳಲ್ಲಿ ವ್ಯಹಿಸಿದ ಹಣವನ್ನು ಲೆಕ್ಕ ಹಾಕಿದರೆ ಕಾಂಗ್ರೆಸ್ ಅಗ್ರಸ್ಥಾನದಲ್ಲಿದೆ. ತೆಲಂಗಾಣ ಮತ್ತು ಮಧ್ಯ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ಫೇಸ್‌ಬುಕ್ ಜಾಹೀರಾತುಗಳಿಗೆ ಹೆಚ್ಚು ಖರ್ಚು ಮಾಡಿದ ಪಕ್ಷವಾಗಿದೆ ಎಂದು ಸುದ್ದಿ ವಾಹಿನಿಗಳಿಗೆ ತಿಳಿದು ಬಂದಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಕಳೆದ ಏಳು ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಜಾಹೀರಾತುಗಳಿಗೆ ಹಣ ಖರ್ಚು ಮಾಡುವ ವಿಷಯದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ.

7 ದಿನಗಳಿಗೆ 26 ಲಕ್ಷ ವೆಚ್ಚ

ಕಾಂಗ್ರೆಸ್ ಚುನಾವಣಾ ರಾಜ್ಯಗಳಲ್ಲಿ ಫೇಸ್‌ಬುಕ್ ಜಾಹೀರಾತುಗಳಿಗಾಗಿ 26 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದೆ. ಕಾಂಗ್ರೆಸ್ ಪಕ್ಷದ ತೆಲಂಗಾಣ ಘಟಕ 13.24 ಲಕ್ಷ ರೂ, ಮಧ್ಯಪ್ರದೇಶ ಘಟಕ 12.84 ಲಕ್ಷ ರೂಪಾಯಿ ಖರ್ಚು ಮಾಡಿದೆ. ಒಟ್ಟಾರೆ ಆಯಾ ರಾಜ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಮೊತ್ತ ಬಿಜೆಪಿಯ ಜಾಹೀರಾತು ಸ್ವಲ್ಪವೇ ಹೆಚ್ಚಾಗಿದೆ.

ಬಿಜೆಪಿಯಿಂದಲೂ ಲಕ್ಷ ಲಕ್ಷ ವೆಚ್ಚ

ಫೇಸ್‌ಬುಕ್‌ನಲ್ಲಿ ಜಾಹಿತಾತು ವೆಚ್ಚ ಮಾಡುವಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ . ಕಳೆದ ವಾರ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಫೇಸ್‌ಬುಕ್ ಪ್ರಚಾರಕ್ಕಾಗಿ ಕಮಲ ಪಾಳಯ ಕೂಡ 26 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಛತ್ತೀಸ್‌ಗಢದಲ್ಲಿ ಮತದಾರರನ್ನು ಗುರಿಯಾಗಿಸಿಕೊಂಡು ಜಾಹೀರಾತುಗಳಿಗಾಗಿ ಪಕ್ಷವು 18.89 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, ರಾಜಸ್ಥಾನದಲ್ಲಿ 7 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದೆ.

ಫೇಸ್‌ಬುಕ್‌ನಲ್ಲಿ 30 ಜಾಹೀರಾತುಗಳನ್ನು ಕೊಟ್ಟಿರುವ ‘ಆಕಾಶ್ ವಿಜಯವರ್ಗಿಯ ತಂಡ ವೈಯಕ್ತಿಕ ವಿಭಾಗದಲ್ಲಿ’ 8 ಲಕ್ಷ ರೂಪಾಯಿಯನ್ನ ಖರ್ಚು ಮಾಡಿದೆ. ಆಕಾಶ್ ವಿಜಯವರ್ಗಿಯ ಅವರು ಈ ಬಾರಿ ಇಂದೋರ್‌ನಿಂದ ಕಣಕ್ಕಿಳಿದಿರುವ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರ ಪುತ್ರರಾಗಿದ್ದಾರೆ. ಕಾಂಗ್ರೆಸ್ನಲ್ಲಿ ಖರ್ಗೆ ಫ್ಯಾನ್ಸ್ ಕ್ಲಬ್ ಕಳೆದ ವಾರ ಫ್ರಾಕ್ಸಿ ಜಾಹೀರಾತಿಗೆ 4 ಲಕ್ಷ ಖರ್ಚು ಮಾಡಿದೆ.

ಒಂದೇ ರಾಜ್ಯದಲ್ಲಿ 18.9 ಲಕ್ಷ

ಒಂದೇ ರಾಜ್ಯದ ಪ್ರಚಾರದ ವೆಚ್ಚಕ್ಕೆ ಬಂದರೆ, ಬಿಜೆಪಿ ಹೆಚ್ಚು ಖರ್ಚು ಮಾಡಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿ 692 ಫೇಸ್‌ಬುಕ್ ಜಾಹೀರಾತುಗಳನ್ನ ನೀಡಿದ್ದು, ಇದರ ಬೆಲೆ ಅಂದಾಜು 18.89 ಲಕ್ಷ ರೂಪಾಯಿಯಾಗಿದೆ. ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಕುರಿತು ಭೂಪೇಶ್ ಬಘೇಲ್ ಸರ್ಕಾರವನ್ನು ತೆಗೆದುಹಾಕಲು ಬಿಜೆಪಿ ಶ್ರಮಿಸುತ್ತಿದೆ. ಇದಕ್ಕಾಗಿ ಕಳೆದ ಏಳು ದಿನಗಳಲ್ಲಿ 18.89 ಲಕ್ಷ ಖರ್ಚು ಮಾಡಿದ್ದು, ಇದು ಫೇಸ್‌ಬುಕ್ ಇಂಡಿಯಾದ ಅತಿ ದೊಡ್ಡ ಜಾಹೀರಾತು ವೆಚ್ಚವಾಗಿದೆ. ಇದು ಕಾರ್ಪೊರೇಟ್‌ ಕಂಪನಿಗಳನ್ನು ಮೀರಿಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಕಳೆದ ಏಳು ದಿನಗಳಲ್ಲಿ ತೆಲಂಗಾಣ ಮತದಾರರನ್ನು ಗುರಿಯಾಗಿಟ್ಟುಕೊಂಡು 38 ಜಾಹೀರಾತುಗಳನ್ನು ನೀಡಿದ್ದು, 13.24 ಲಕ್ಷ ರೂ ವೆಚ್ಚದಲ್ಲಿ ನಡೆಸಿದೆ, ಈ ವರ್ಗದಲ್ಲಿ ಎರಡನೇ ಅತಿ ಹೆಚ್ಚು ಖರ್ಚು ಮಾಡಿದ ಪಕ್ಷವಾಗಿದೆ.

‘ಸ್ವಾತಂತ್ರ್ಯ ಬಂದ ನಂತರ ಈ ಮಟ್ಟದ ಕೆಟ್ಟ ಸರ್ಕಾರ ಯಾವಾಗಲೂ ಬಂದಿಲ್ಲ’

‘ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಆಗಿದೆ’

ಬಗೆದಷ್ಟು ಬಯಲಾಗುತ್ತಲೇ ಇದೆ KEA ಪರೀಕ್ಷೆ ಅಕ್ರಮ: ಅಭ್ಯರ್ಥಿಗಳಿಗೆ ಬ್ಲೂಟೂತ್ ಕೊಟ್ಟಿದ್ದ ಪಾಟೀಲ್

- Advertisement -

Latest Posts

Don't Miss