Tuesday, April 15, 2025

Latest Posts

ಲೋಕಾಯುಕ್ತ ದಾಳಿ: ಹಣ ಪಡೆಯುವ ಸಂದರ್ಭದಲ್ಲಿ ಆರ್.ಟಿ.ಓ ಅಧೀಕ್ಷ ಬಲೆಗೆ

- Advertisement -

Bellary News: ಬಳ್ಳಾರಿ: ಬಳ್ಳಾರಿಯಲ್ಲಿ ಲೋಕಾಯುಕ್ತ ಅಧಿಕಾರಿ ಆರ್‌.ಟಿ.ಓ ಬಲೆಗೆ ಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ಆರ್‌.ಟಿ.ಓ ಅಧೀಕ್ಷ ಚಂದ್ರಕಾಂತ ಗುಡಿಮನಿ, ಏಜೆಂಟ್‌ ಮೊಹಮ್ಮದ್ ರಾಜ್ ಅವರ ಬಳಿ 15 ಸಾವಿರ ರೂಪಾಯಿ ತೆಗೆದುಕೊಳ್ಳುವಾಗ, ಬಲೆಗೆ ಬಿದ್ದಿದ್ದಾರೆ.

ನಿನ್ನೆ ರಾತ್ರಿ 10.20ರ ಸಮಯದಲ್ಲಿ ಹಣ ಪಡೆಯುವ ಸಂದರ್ಭದಲ್ಲಿ ಚಂದ್ರಕಾಂತ್ ಮತ್ತು ಮೊಹಮ್ಮದ್ ರಾಜ್ ಟ್ರ್ಯಾಪ್ ಆಗಿದ್ದಾರೆ. ಇಬ್ಬರನ್ನೂ ಬಳ್ಳಾರಿಯ ಹಾಲಿ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಇಂದು ಆರೋಪಿಗಳನ್ನು ವಿಚಾರಣೆಗಾಗಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಾರ್ವಜನಿಕರಿಂದ ಆರ್.ಟಿ.ಓ ಅಧಿಕಾರಿಗಳ ಮೇಲೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರ ಶಾಸಕ ಭರತ್ ರೆಡ್ಡಿ ಅವರು ಈ ಕುರಿತು ಆರ್.ಟಿ.ಓ ಕಛೇರಿಗೆ ಭೇಟಿ ನೀಡಿ ಖಡಕ್ ಎಚ್ಚರಿಕೆ ನೀಡಿದ್ದರು. ಇದೀಗ ದಾಳಿ ನಡೆದಿದ್ದು, ಆರ್.ಟಿ.ಓ ಅಧೀಕ್ಷ ಅರೆಸ್ಟ್ ಆಗಿದ್ದಾರೆ.

‘ಸ್ವಾತಂತ್ರ್ಯ ಬಂದ ನಂತರ ಈ ಮಟ್ಟದ ಕೆಟ್ಟ ಸರ್ಕಾರ ಯಾವಾಗಲೂ ಬಂದಿಲ್ಲ’

‘ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಆಗಿದೆ’

ಬಗೆದಷ್ಟು ಬಯಲಾಗುತ್ತಲೇ ಇದೆ KEA ಪರೀಕ್ಷೆ ಅಕ್ರಮ: ಅಭ್ಯರ್ಥಿಗಳಿಗೆ ಬ್ಲೂಟೂತ್ ಕೊಟ್ಟಿದ್ದ ಪಾಟೀಲ್

- Advertisement -

Latest Posts

Don't Miss