Dharwad Political News: ಧಾರವಾಡ : ಉತ್ತರ ಕರ್ನಾಟಕದ ಭಾಗಕ್ಕೆ ಪ್ರತಿಪಕ್ಷದ ನಾಯಕನ ಸ್ಥಾನ ಕೊಡಬೇಕಿತ್ತು. ಆದ್ರೆ ಅದು ಆಗಿಲ್ಲಾ. ಇದರಿಂದ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯಾತ್ನಾಳ ಅವರಿಗೆ ಅಸಮಾಧಾನ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಹಾಗೂ ಮಾಜಿ ಮೇಯರ್ ಆಗಿರುವ ಬಿಜೆಪಿ ಮುಖಂಡ ಈರೇಶ ಅಂಚಟಗೇರಿ ಹೇಳಿದ್ರು.
ಧಾರವಾಡದಲ್ಲಿ ಮಾತನಾಡಿದ ಅವರು, 3 ಬಾರಿ ಶಾಸಕರಾಗಿ ಗೆದ್ದಿರುವ ಅರವಿಂದ ಬೆಲ್ಲದ ಅವರಿಗೆ ಉತ್ತರ ಕರ್ನಾಟಕದ ದೃಷ್ಟಿಯಿಂದ ಪ್ರತಿಪಕ್ಷನಾಯಕನ ಸ್ಥಾನ ಕೊಡಬೇಕಿತ್ತು. ಇವರ ಜೋತೆಗೆ ಬಸನಗೌಡ ಪಾಟೀಲ ಯಾತ್ನಾಳ ಕೂಡ ಸ್ಪರ್ಧೆಯಲ್ಲಿ ಇದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆಯೂ ಪಕ್ಷದ ಎಲ್ಲಾ ನಾಯಕರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ರಾಜ್ಯದಲ್ಲಿ ಆಗುತ್ತೆ ಎಂದರು.
ಬೆಳಗಾವಿ ಅಧಿವೇಶನದ ಅವಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು. ಉತ್ತರ ಕರ್ನಾಟಕದ ಸಮಗ್ರ ನಾಯಕರ ಸಮ್ಮುಖದಲ್ಲಿ ಇಬ್ಬರು ನಾಯಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅಂಚಟಗೇರಿ ಇದೇ ಸಂದರ್ಭದಲ್ಲಿ ಹೇಳಿದ್ರು.
ವಿಶ್ವಕಪ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬರಲೆಂದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ, ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಈರೇಶ ಅಂಚಟಗೇರಿ ಶುಭಹಾರೈಸಿದ್ದಾರೆ.
ವಿಶ್ವಕಪನಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಅತ್ಯುದ್ಬುತ ಆಟದ ಮೂಲಕ ವಿಶ್ವಕಪನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಲಿದೆ ಎಂದರು.
ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು
‘ಪ್ರಧಾನಿ ಮೋದಿಯವರ ಈ ನಡೆಯನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?’
‘ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು’




