Thursday, February 6, 2025

Latest Posts

ವಿಜಯೇಂದ್ರ ಎಂದು ಹೇಳುವ ಬದಲು ಯತೀಂದ್ರರನ್ನು ಭ್ರಷ್ಟ ಎಂದ ಸಚಿವ ಸಂತೋಷ್ ಲಾಡ್..

- Advertisement -

Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಅಸಮಾಧಾನ ಬಿಜೆಪಿಯಲ್ಲಿ ಮೊದಲಿಂದಲೂ ಇದೆ. ಕೇಂದ್ರದ ಬಗ್ಗೆ ಬಿಜೆಪಿ ಯಾವ ಸಂಸದರೂ ಮಾತನಾಡುವುದಿಲ್ಲ. ಆದರೆ ರಾಜ್ಯದ ವಿಷಯ ಬಂದಾಗ ಎಲ್ಲರೂ ಮಾತನಾಡುತ್ತಾರೆ. ದೇಶದ ವಿಚಾರ ಬಂದಾಗ ಮಾತನಾಡುವುದಿಲ್ಲ.

ಕ್ಯಾಬಿನೆಟ್ ಪ್ರಗತಿ ಪರಿಶೀಲನೆ ಇಲ್ಲ, ಕ್ಯಾಬಿನೆಟ್ ಬಿಟ್ಟು ನಿರ್ಧಾರ ತೆಗೆದುಕೊಳ್ಳುವುದು ಇದನ್ನು ಹತ್ತು ವರ್ಷದಿಂದ ನೋಡುತ್ತಾ ಬಂದಿದ್ದೇವೆ.  ಬಿಜೆಪಿ ಕರ್ನಾಟಕ ವಿಷಯಕ್ಕೆ ಬಂದಾಗ ಬೆಳಗ್ಗೆ ಏನು ಹೇಳುತ್ತಾರೆ, ರಾತ್ರಿ ಏನು ಹೇಳುತ್ತಾರೆ ಗೊತ್ತಾಗುವುದಿಲ್ಲ. ಬಿಜೆಪಿ ಪತನಕ್ಕೆ ಜನ ತೀರ್ಮಾನ ಮಾಡಿದ್ದಾರೆ. ದೇಶದಲ್ಲಿ ಸತ್ಯ ಹೇಳೋದೆ ದೊಡ್ಡ ಅಪರಾಧವಾಗಿದೆ, ಸತ್ಯ ಹೇಳಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಉಸಿರುಗಟ್ಟಿಸುವ ವಾತವರಣವಿದೆ, ಇಂದಲ್ಲಾ ನಾಳೆ ಅದು ಬಯಲಿಗೆ ಬರುತ್ತೆ. ನರೇಂದ್ರ ಮೋದಿ ಅವರಿಗೆ ಮಾತ್ರ ಅನುಕೂಲ ಆಗಿದೆ ಆದರೆ ಅವರಿಂದ ದೇಶಕ್ಕೆ ಒಂದು ರೂಪಾಯಿ ಅನುಕೂಲವಾಗಿಲ್ಲ ಎಂದು ಸಂತೋಷ್ ಹೇಳಿದ್ದಾರೆ.

ಇನ್ನು ಮಾತಿನ ಭರದಲ್ಲಿ ವಿಜಯೇಂದ್ರ ಎನ್ನುವ ಬದಲು, ಯತೀಂದ್ರ ಎಂದು ಹೇಳಿ, ಗೊಂದಲ ಮಾಡಿಕೊಂಡ ಸಚಿವರು, ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡತ್ತಾರೆ ಅವರು ಬಹಳಷ್ಟು ಭ್ರಷ್ಟರಿದ್ದಾರೆ. ಯತೀಂದ್ರರನ್ನು ಯಾಕೆ ಅಧ್ಯಕ್ಷರಾಗಿ ಮಾಡಿದರು ದಯವಿಟ್ಟು ಅವರನ್ನು ಕೇಳಿ. ಯತೀಂದ್ರ ಮೇಲೆ ಆಪಾದನೆ ಹೊರಿಸಿದವರು ಯಾರು..? ಎಂದು ಹೇಳಿದ್ದಾರೆ. ಬಳಿಕ ಮಾತಿನ ತಪ್ಪು ಅರಿವಾಗಿ ನಾನು ವಿಜಯೇಂದ್ರ ಬಗ್ಗೆ ಮಾತನಾಡಿದೆ ಅಂತ ಸಮಜಾಯಿಷಿ ನೀಡಿದ್ದಾರೆ.

ವಿಜಯೇಂದ್ರ ಆಡಳಿತ ಹಸ್ತಕ್ಷೇಪ ಮಾಡುತ್ತಾರೆ ಅಂತ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಯಿತು. ಆರ್ ಎಸ್ ಎಸ್ ಮತ್ತು ಕೇಂದ್ರ ಸರ್ಕಾರ ವಿಜಯೇಂದ್ರರ ಹಸ್ತಕ್ಷೇಪ ಬೇಸತ್ತು ಯಡಿಯೂರಪ್ಪನವರನ್ನು ಕೆಳಗಿಳಿಸಿತು. ಆದರೆ ಈಗ ಅದೇ ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷ ಮಾಡಲಾಗಿದೆ ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಲ್ಯಾಂಡ್ ಮಾಫಿಯಾ” ಎಂಬ ಕರಾಳ ದಂದೆ ಎಚ್ಚರ…!

ಚುನಾವಣೆಯಲ್ಲಿ ಗೆಲ್ಲಲು ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ

ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

- Advertisement -

Latest Posts

Don't Miss