Wednesday, August 6, 2025

Latest Posts

ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋದ ಭೂಪ: ಲ್ಯಾಂಡ್ ಆಗುತ್ತಿದ್ದಂತೆ ಅರೆಸ್ಟ್..

- Advertisement -

Bengaluru News: ಬೆಂಗಳೂರು: ವಿಮಾನದಲ್ಲಿ ಕುಡುಕರು ಹಾವಳಿ ಮಾಡಿ, ಅರೆಸ್ಟ್ ಆದ ಕೇಸ್‌ಗಳು, ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಕೇಸ್‌ಗಳು ಸುಮಾರಿದೆ. ಇಂದು ಕೂಡ ಇದೇ ರೀತಿ ಓರ್ವ ವ್ಯಕ್ತಿ ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋಗಿ, ಜೈಲು ಪಾಲಾಗಿದ್ದಾನೆ.

ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಚಲಿಸುತ್ತಿದ್ದ 33 ವರ್ಷದ ವ್ಯಕ್ತಿ ರಣಧೀರ್ ಕುಡಿದ ಅಮಲಿನಲ್ಲಿದ್ದ. ಗಗನಸಖಿ ಎದುರಿಗೆ ವಿಚಾರಣೆಗೆ ಬಂದಾಗ, ಆಕೆಯ ಕೈ ಹಿಡಿದು ಎಳೆದಿದ್ದಲ್ಲದೇ, ಆಕೆಯನ್ನು ಮುದ್ದು ಮಾಡಿ, ಅಸಭ್ಯವಾಗಿ ವರ್ತಿಸುತ್ತಿದ್ದ. ಆಕೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ, ಅವನ ವರ್ತನೆಯಲ್ಲಿ ಬದಲಾವಣೆಯಾಗಲಿಲ್ಲ.

ಅವನ ಈ ವರ್ತನೆಗೆ ಸಹಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕ್ಯಾಪ್ಟನ್ ಬಂದು, ಈ ರೀತಿ ಅನುಚಿತ ವರ್ತನೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ರಣಧೀರ್ ನಡುವಳಿಕೆಗೆ ಬೇಸತ್ತ ಏರ್‌ಪೋರ್ಟ್ ಸಿಬ್ಬಂದಿ, ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ರಣಧೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

‘ಪೆನ್‌’ಡ್ರೈವ್‌ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ?’

ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್​ ಜಾರಕಿಹೊಳಿ..!

ಕರ್ನಾಟಕ ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಪರಿವರ್ತನೆಗೆ ಶ್ರಮ: ವಿಜಯೇಂದ್ರ ಯಡಿಯೂರಪ್ಪ

- Advertisement -

Latest Posts

Don't Miss