Tuesday, February 4, 2025

Latest Posts

ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗೆ ಜೀವ ಬೆದರಿಕೆ..!

- Advertisement -

International News: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧ ನಡೆಯುತ್ತಿದ್ದು, ಅದರ ಎಫೆಕ್ಟ್ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಮೇಲೆ ಬೀಳುವ ಸಂಭವವಿದೆ ಎಂದು ಗುಪ್ತಚರ ಇಲಾಖೆ, ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿ ರಾಯಭಾರಿ ಕಚೇರಿಯಲ್ಲಿರುವ ಅಧಿಕಾರಿ ನೌರ್ ಗಿಲೋನ್ ಮೇಲೆ, ಮಾರಮಾಂತಿಕ ಹಲ್ಲೆ ಮತ್ತು ಕಚೇರಿ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

ಇಷ್ಟೇ ಅಲ್ಲದೇ, ಪ್ಯಾಲೇಸ್ತಿನ್ ಬೆಂಬಲಿಗರು, ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲ್ ರಾಯಭಾರಿ ಅಧಿಕಾರಿಗೆ, ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಎಲ್ಲ ಮಾಹಿತಿಯಾಧಾರದ ಮೇಲೆ, ರಾಯಭಾರಿ ಕಚೇರಿಗೆ ಮತ್ತು ಅಧಿಕಾರಿಗೆ ಭದ್ರತೆ ಹೆಚ್ಚಿಸಲಾಗಿದೆ. ಇಸ್ರೇಲ್ ರಾಯಭಾರಿ ಈ ಬಗ್ಗೆ ಪತ್ರ ಬರೆದಿದ್ದು, ತನಗೆ ಸಾಮಾಜಿಕ ಜಾಲತಾಣಗಳಲ್ಲಿ, ಉಗ್ರರಿಂದ ಜೀವ ಬೆದರಿಕೆ ಬರುತ್ತಿದ್ದು, ತಮಗೆ ಹೆಚ್ಚಿನ ಭದ್ರತೆ ಬೇಕು ಎಂದು ಮನವಿ ಮಾಡಿದ್ದರು. ಈ ಕಾರಣಕ್ಕಾಗಿ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ, ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಬಂದ ಜೀವಬೆದರಿಕೆ ಸಂದೇಶಗಳ ಬಗ್ಗೆಯೂ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಸ್ತಿನಲ್ಲಿರುವ ಪೊಲೀಸರು ಕೂಡ ಹೆಚ್ಚಿನ ನಿಗಾ ವಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಭಾರತದಲ್ಲಿ ಪ್ಯಾಲೇಸ್ತಿನ್ ಬೆಂಬಲಿಸಿ, ಹಲವರು ತಮ್ಮ ತಮ್ಮ ಊರುಗಳಲ್ಲಿ ಸಭೆ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

ಮೊನ್ನೆ ತಾನೇ ಬೆಂಗಳೂರಿನ ಎಂ.ಜಿ.ರೋಡ್‌ನಲ್ಲಿಯೂ ಪ್ಯಾಲೆಸ್ತಿನ ಬೆಂಬಲಿಸಿ ಜಾಥಾ ನಡೆದಿತ್ತು. ಕೇರಳದಲ್ಲಿ ಪ್ಯಾಲೆಸ್ತಿನ್ ಬೆಂಬಲಿಸಿ, ಮುಸ್ಲಿಂ ಸಂಘಟನೆ ರ್ಯಾಲಿ ಮತ್ತು ಸಭೆ ಮಾಡಿತ್ತು. ಇದೇ ವೇಳೆ ಮಾತನಾಡಿದ ಕೇರಳ ಸಂಸದ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ಕೊಟ್ಟು, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ಬರೀ ಆಸ್ಪತ್ರೆ ಅಷ್ಟೇ ಅಲ್ಲ, ಗಾಜಾದ ಶಾಲೆಗಳು ಉಗ್ರರ ಅಡ್ಡಾಗಳಾಗಿದೆ..

ಅಲ್-ಶಿಫಾ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳು ಸ್ಥಗಿತ: ಶಿಶುಗಳು ಸೇರಿ 24 ರೋಗಿಗಳ ಸಾವು

- Advertisement -

Latest Posts

Don't Miss