Bengaluru News: ಬೆಂಗಳೂರು: ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸಿದ್ದ ಫ್ಲ್ಯಾಟ್ ಒಂದರ ಮೇಲೆ CCB ಪೊಲೀಸರು ದಾಳಿ ನಡೆಸಿದ್ದು, ಬೆಟ್ಟಿಂಗ್ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಕೇತ್ ಮತ್ತು ರಿಷಬ್ ಬಂಧಿತ ಆರೋಪಿಗಳು. ರಾಜರಾಜೇಶ್ವರಿ ನಗರದ ಫ್ಲಾಟ್ ಒಂದರಲ್ಲಿ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸರು. ದಾಳಿ ವೇಳೆ ಲ್ಯಾಪ್ ಟಾಪ್ ಹಾಗೂ ಮೊಬೈಲ್‌ಗಳು ಪತ್ತೆಯಾಗಿದೆ. ಆನ್‌ಲೈನ್ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ಆರೋಪಿಗಳು ನಡೆಸ್ತಿದ್ದರು ಎಂದು ತಿಳಿದು ಬಂದಿದೆ. ಬಳಿಕ ಆರೋಪಿಗಳ ಫ್ಲಾಟ್ ಪರಿಶೀಲನೆ ನಡೆಸಿದಾಗ 1 ಕೆಜಿ ಚಿನ್ನ ಪತ್ತೆಯಾಗಿದೆ. ನೂರು ಗ್ರಾಂ ತೂಕದ ಹತ್ತು ಚಿನ್ನದ ಬಿಸ್ಕೆಟ್ಸ್ ಪತ್ತೆಯಾಗಿವೆ. ಪತ್ತೆಯಾದ ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಗದ ಹಿನ್ನಲೆ ಸಿಸಿಬಿ ಪೊಲೀಸರು ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಬೆಂಗಳೂರಿನಲ್ಲಿ ಬೆಟ್ಟಿಂಗ್ ಮಾಫಿಯಾ ಮತ್ತೆ ತಲೆ ಎತ್ತಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಅಷ್ಟೇ ಅಲ್ಲದೇ ಆರೋಪಿಗಳು ಯಾರೊಂದಿಗೆ ಬೆಟ್ಟಿಂಗ್ ನಡೆಸಿದ್ದಾರೆ. ಬೆಟ್ಟಿಂಗ್ ಹಿಂದೆ ಯಾರಿದ್ದಾರೆಂದು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಟ – ಸ್ಥಳೀಯರಿಗೆ ಬೆದರಿಕೆ ಹಾಕುವ ದೃಶ್ಯ ಸೆರೆ
ಇಸ್ರೇಲ್‌ಗೆ ಪಾಕ್ ಸಪೋರ್ಟ್: ಹಮಾಸ್ ವಿರುದ್ಧ ಶಸ್ತ್ರಾಸ್ತ್ರ ಸರಬರಾಜು..?
World Cup 2023ಯಲ್ಲಿ ಭಾರತಕ್ಕೆ ಸೋಲು: ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು