ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!

Mysuru News: ಮೈಸೂರು: ಬಿಳಿಗೆರೆ ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಮೈಸೂರು SP ಸೀಮಾ ಲಾಟ್ಕರ್ ಅಮಾನತು ಮಾಡಿದ್ದಾರೆ.

ನಂಜೇಶ್ ಹಾಗೂ ಪ್ರಸನ್ನಕುಮಾರ್ ಅಮಾನತುಗೊಂಡ ಸಿಬ್ಬಂದಿ. ಕರ್ತವ್ಯ ಲೋಪ ಅಡಿಯಲ್ಲಿ ಕ್ರಮಕ್ಕೆ ಆದೇಶಿಸಿದ್ದಾರೆ. ನವೆಂಬರ್ 12 ರಂದು ಬಿಳಿಗೆರೆ ಪೊಲೀಸರು ಕಿರಣ್ ಕುಮಾರ್ ಎಂಬ ಯುವಕನನ್ನು ಠಾಣೆಗೆ ಕರೆದೊಯ್ದಿದ್ದರು. ಬಳಿಕ ಪೊಲೀಸರು ಕಿರಣ್ಗೆ ಕಿರುಕುಳ ನೀಡಿದ್ದರಂತೆ. ಪೊಲೀಸರ ಕಿರುಕುಳದಿಂದ ನೊಂದ ಯುವಕ ಪೊಲೀಸರಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ.

ನವೆಂಬರ್ 13 ರಂದು ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ಪೊಲೀಸರ ಕಿರುಕುಳಕ್ಕೆ ಯುವಕ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡು, ನನಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಕಿರಣ್ ಸಾಯುವ ಮುನ್ನ ಹೇಳಿದ್ದ ಎಂದು ತಿಳಿದುಬಂದಿದೆ.

ಮನೆಯಲ್ಲಿ ಬಿರಿಯಾನಿ ತಿಂದ 17 ಜನರು ಅಸ್ವಸ್ಥ

ಎಚ್‌ಡಿಕೆ ಜತೆ ಸಿದ್ದರಾಮಯ್ಯ ಕೂಡಾ ದತ್ತಪೀಠಕ್ಕೆ ಬರಲಿ ಎಂದ ಸಿ.ಟಿ ರವಿ

ಛತ್ರಪತಿ ಶಿವಾಜಿಯ ಫೋಟೋ ಎಡಿಟ್ ಮಾಡಿ, ಅವಹೇಳನ ಮಾಡಿದ ಪುಂಡರು ಅರೆಸ್ಟ್

About The Author