Saturday, January 11, 2025

Latest Posts

ನಿಗಮ ಮಂಡಳಿಯಲ್ಲಿ ನನಗೆ ಇಂಟರೆಸ್ಟ್ ಇಲ್ಲ : ಶಾಸಕ ಬಸವರಾಜ್ ರಾಯರೆಡ್ಡಿ

- Advertisement -

Bengaluru News: ಬೆಂಗಳೂರು: ನಾನು ಸಿಎಂ ಭೇಟಿಗೆ ಬಂದಿದ್ದೆ, ಸುರ್ಜೇವಾಲ ಕೂಡ ಇದ್ದಿದ್ದರಿಂದ ಲೋಕಾಸಭೆ ಚುನಾವಣೆ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಅಯ್ತು ಎಂದು ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿಯ ಬಗ್ಗೆ ಯಾವುದೇ ಚರ್ಚೆ ಆಗಲಿಲ್ಲ. ನನಗೆ ನಿಗಮ ಮಂಡಳಿಯ ಬಗ್ಗೆ ಆಸಕ್ತಿ ಇಲ್ಲ, ಅದರ ಅವಶ್ಯಕತೆನೂ ನನಗೆ ಬರಲ್ಲ. ನಾನು ಸರ್ಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ಏನು ಮಾತನಾಡಿಲ್ಲ. ನಾನು ಒಬ್ಬ ಕಾಂಗ್ರೆಸಿಗ, ಸಿಎಂ ಸಿದ್ದರಾಮ್ಯ ಬೆಸ್ಟ್ ಸಿಎಂ ಇದ್ದಾರೆ. ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಗೆ ಅಂತಿಮ ಕಸರತ್ತು ನಡೆಯುತ್ತಿದೆ ಎಂದರು.

- Advertisement -

Latest Posts

Don't Miss