“ರಾಹುಲ್ ಎಂದರೆ ರಾಹು ಗ್ರಹ”

Political News: ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಪ್ರಚಾರ ನಡೆಸುವಾಗ, ಮೋದಿ ಅಹಮದಾಬಾದ್‌ಗೆ ಮ್ಯಾಚ್ ನೋಡಲು ಹೋದ ಕಾರಣಕ್ಕೆ, ಮ್ಯಾಚ್ ಸೋತಿತು ಎಂದು ಹೇಳಿದ್ದರು. ಅದಕ್ಕೆ ತಿರುಗೇಟು ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದು, ರಾಹುಲ್ ಎಂದರೆ ರಾಹುಗ್ರಹ ಎಂದಿದ್ದಾರೆ.

“ರಾಹುಲ್ ಎಂದರೆ ರಾಹು ಗ್ರಹ” ರಾಹುಲ್ ಗಾಂಧಿ ಕಾಂಗ್ರೆಸ್ ಗೆ ಆವರಿಸಿದ ಮೇಲೆ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಹುಡುಕಾಡುವ ಪರಿಸ್ಥಿತಿ ತಲುಪಿತು ಎಂದು ಕಾಂಗ್ರೆಸಿಗರೇ ಬೀದಿಯಲ್ಲಿ ನಿಂತು ಮಾತನಾಡಿಕೊಳ್ಳುತ್ತಾರೆ. ರಾಹುಗ್ರಹ ಬಿಡಿಸಲೆಂದೇ AICC ಅಧ್ಯಕ್ಷ ಸ್ಥಾನಕ್ಕೆ ಮಾನ್ಯ ಖರ್ಗೆಯವರು ಬಂದು ಕುಳಿತ್ತಿದ್ದಾರೆ, ಆದರೆ ರಾಹು ಎಂಬ ರಿಮೋಟ್ ಕಂಟ್ರೋಲ್ ಇನ್ನೂ ತಗುಲಿಕೊಂಡಿದೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಮೂಂಚೂಣಿ ಸಾಲಿಗೆ ತಂದು ಇವತ್ತು 4ನೇ ಸ್ಥಾನದಲ್ಲಿ ಭಾರತವನ್ನು ನಿಲ್ಲಿಸಿದ ಪ್ರಧಾನಿ ಮೋದಿಯವರು ಯಾವುದರ ಸಂಕೇತ? ವಿಜಯದ ಸಂಕೇತ,ಅಭಿವೃದ್ಧಿಯ ಸಂಕೇತ , ಸಾಮರ್ಥ್ಯದ ಸಂಕೇತ ಎಂದು ಜಗತ್ತು ಹೇಳುತ್ತಿದೆ. ಕಾಲಿಟ್ಟಲ್ಲಿ ಕಾಂಗ್ರೆಸ್ ಮುಳುಗಿಸಿದ ರಾಹುಲ್ ಗಾಂಧಿ ಶಕುನದ ಬಗ್ಗೆ ಮಾತನಾಡಿ ತಾವು ಯಾವ ಶಕುನ ಎಂದು ಜನತೆಗೆ ನೆನಪಿಸಿಕೊಟ್ಟಿದ್ದಾರೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!

ಧಮ್ಮಿದ್ದರೆ RSS ಬ್ಯಾನ್ ಮಾಡಲಿ : ಆರ್. ಅಶೋಕ್ ಸವಾಲ್

ತೆಲಂಗಾಣದಲ್ಲಿ ಸಚಿವ ಸಂತೋಷ್‌ ಲಾಡ್‌ ಬಿರುಸಿನ ಪ್ರಚಾರ

About The Author