ಪ್ರೀತಿಸಿ ಮದುವೆಯಾದ ಪತ್ನಿಯ ಕೊರಳನ್ನೇ ಕತ್ತರಿಸಿ ಕೊಲೆ ಮಾಡಿದ ಪತಿ: ನ್ಯಾಯಕ್ಕಾಗಿ ಕುಟುಂಬಸ್ಥರ ಅಳಲು

Tumakuru crime News: ತುಮಕೂರು: ಒಬ್ಬರನೊಬ್ಬರು ಪ್ರೀತಿಸಿ ತಮ್ಮಿಷ್ಟದಂತೆಯೇ ಮದುವೆಯಾಗಿದ್ದ ಜೋಡಿ ನಡುವೆ ಅನುಮಾನದ ಭೂತ ಆವರಿಸಿದ್ದು, ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ತುಮಕೂರು ತಾಲೂಕಿನ ದೊಡ್ಡಸಾರಂಗಿ ಪಾಳ್ಯದಲ್ಲಿ ನಡೆದಿದೆ.

ಚೈತ್ರಾ ಕೊಲೆಯಾದ ಮಹಿಳೆ, ದಿಲೀಪ್ ಆರೋಪಿ. ಗಂಡನ ಚಿತ್ರಹಿಂಸೆ ಸಹಿಸಲಾಗದೆ ಚೈತ್ರಾ ತವರು ಮನೆ ಸೇರಿದ್ದರು. ಅಷ್ಟಕ್ಕೂ ಸುಮ್ಮನಾಗದ ದಿಲೀಪ್ ಅಲ್ಲಿಗೆಯೇ ಹೋಗಿ ಕೊರಳು ಕತ್ತರಿಸಿ, ಬಳಿಕ ಕ್ಷಮಿಸಿ ಎಂದು ಹೆಂಡತಿಗೆ ಚಿಕಿತ್ಸೆ ಕೊಡಿಸಿದ್ದ. ಚಿಕಿತ್ಸೆ ಮಗಿಸಿ ಮನೆ ಸೇರಿದ್ದ ಚೈತ್ರಾ ಸತತ ಎರಡು ತಿಂಗಳು ನೋವು ತಿಂದು ಪ್ರಾಣಬಿಟ್ಟಿದ್ದಾರೆ. ಕಂಪ್ಯೂಟರ್ ಸೆಂಟರ್ ನಲ್ಲಿ ಅರಳಿದ ಪ್ರೀತಿ, ಸಾವಿನಲ್ಲಿ ಅಂತ್ಯ ಕಂಡಿದೆ. ನ್ಯಾಯಕ್ಕಾಗಿ ಚೈತ್ರ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ಗ್ರಾಮದ ಚೈತ್ರಾ ಹಾಗೂ ತುಮಕೂರು ತಾಲೂಕಿನ ಮೈದಾಳ ಗ್ರಾಮದ ದಿಲೀಪ್ ನಡುವೆ ಪ್ರೀತಿಯಾಗಿತ್ತು. ಕಂಪ್ಯೂಟರ್ ಸೆಂಟರ್ಗೆ ಹೋಗುವಾಗ ಇಬ್ಬರಲ್ಲೂ ಪ್ರೀತಿಯಾಗಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸುಖ, ಸಂತೋಷದಿಂದ ಸಂಸಾರ ನಡೆಸುತ್ತಿದ್ದ ಈ ಜೋಡಿಗಳ ನಡುವೆ ವರ್ಷ ಕಳೆಯುತ್ತಿದ್ದಂತೆ ಅನುಮಾನದ ಭೂತ ಹುಟ್ಟುಕೊಂಡಿತ್ತು. ಪತಿ ದಿಲೀಪ್ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆ ಸದಾ ಅನುಮಾನ ಪಡುತ್ತಿದ್ದ. ಅನುಮಾನದಿಂದ ಪತ್ನಿಗೆ ದಿನನಿತ್ಯ ಹಿಂಸೆ‌ ಕೊಡುತ್ತಿದ್ದ. ಹೊಡೆದು, ಬಡಿದು ಚಿತ್ರಹಿಂಸೆ ನೀಡುತ್ತಿದ್ದ. ಇದನ್ನ ಸಹಿಸಲಾಗದೇ ಚೈತ್ರಾ ತವರು ಮನೆ ಸೇರಿದ್ದರು. ಅಷ್ಟೂ ಬಿಡದೆ ದಿಲೀಪ್ ಸೀದಾ ಪತ್ನಿಯ ತವರು ಮನೆಗೆ ಹೋಗಿ ಪತ್ನಿಗೆ ಚಾಕು ಹಾಕಿದ್ದ. ಕೊರಳಿಗೆ ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದ. ಬಳಿಕ ತಪ್ಪಾಗಿದೆ ಕ್ಷಮಿಸಿ ಎಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ.

ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಚೈತ್ರಾ ಅವರು ಸ್ವಲ್ಪ ಚೇತರಿಕೆಯಾದ ಹಿನ್ನೆಲೆ ವಾಪಸ್ ತವರು ಮನೆಗೆ ತೆರಳಿದ್ದರು. ತವರು ಮನೆಯವರೇ ಚೈತ್ರಾಳನ್ನ ನೋಡಿಕೊಳ್ಳುತ್ತಿದ್ದರು. ಸತತ ಎರಡು ತಿಂಗಳು ನೋವು ಅನುಭವಿಸಿ ಚೈತ್ರಾ ಸಾವನ್ನಪ್ಪಿದ್ದರೆ. ಮಗಳ ಸಾವಿನಿಂದ ನೊಂದ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಕೊಲೆ ಯತ್ನ
ಇನ್ನು ಈ ಹಿಂದೆ ಕೂಡ ದಿಲೀಪ್ ಇದೇ ರೀತಿ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಆಗ ಚೈತ್ರಾ ಕುಟುಂಬದವರು ಬುದ್ದಿ ಹೇಳಿ ಸುಮ್ಮನಾಗಿದ್ದರು. ಮೊದ ಮೊದಲು ಕಂಪನಿ ಉದ್ಯೋಗಿ ಅಂತಾ ಹೇಳಿ ವಂಚಿಸಿ ಮದುವೆಯಾಗಿದ್ದ ದಿಲೀಪ್ ಆಟೋ ಓಡಿಸುತ್ತಿದ್ದ ಎಂದು ತಿಳಿದು ಬಂದಿದೆ.

ಪೊಲೀಸ್ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು!

ಧಮ್ಮಿದ್ದರೆ RSS ಬ್ಯಾನ್ ಮಾಡಲಿ : ಆರ್. ಅಶೋಕ್ ಸವಾಲ್

ತೆಲಂಗಾಣದಲ್ಲಿ ಸಚಿವ ಸಂತೋಷ್‌ ಲಾಡ್‌ ಬಿರುಸಿನ ಪ್ರಚಾರ

About The Author