ಅಥಣಿಯಲ್ಲಿ ತಪ್ಪಿದ ಭಾರೀ ಅನಾಹುತ: ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಚಾವ್

Chikkodi News: ಚಿಕ್ಕೋಡಿ: ಅಥಣಿಯಲ್ಲಿ ಬಾರಿ ಅನಾಹುತ ಒಂದು ತಪ್ಪಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂದಲು ಎಳೆ ಅಂತದರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅಥಣಿ-ರಡ್ಡೇರಹಟ್ಟಿ ರಸ್ತೆ ಮೇಲೆ ಕಬ್ಬು ಸಾಗಾಟ ಟ್ರಾಕ್ಟರ್ ಟ್ರೈಲರ್ರ್ ಪಿನ್ ಕಟ್ಟಾಗಿ ಅವಘಡ ಸಂಭವಿಸಿದೆ. ಎಸ್ ಎಂ ಎಸ್ ಕಾಲೇಜು ಹತ್ತಿರ ಕಬ್ಬು ತುಂಬಿದ ಟ್ರಾಕರ್ ಟ್ರೈಲರ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ವೇಳೆ ಹಿಂಬದಿ ಟ್ರೈಲರ್ ಪಿನ್ ಕಟ್ಟಾಗಿ ಈ ಅಪಘಾತ ಸಂಭವಿಸಿದೆ. ಚಾಲಕನ ಗಮನಕ್ಕೆ ಬಾರದೆ ಈ ಘಟನೆ ನಡೆದಿದೆ.

ಪಿನ್ ಕಟ್ಟಾಗಿ, ಹಿಂಬದಿ ಟ್ರೈಲರ್ ರಸ್ತೆ ಪಕ್ಕದ ಫುಟ್‌ಪಾತ್ ಮೇಲೆ ಹಠಾತನೆ ಬಂದ ಪರಿಣಾಮ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಗಲಿಬಿಲಿಗೊಂಡು ಆತಂಕಕ್ಕೆ ಒಳಗಾಗಿದ್ದರು. ಘಟನೆಯ ನಂತರ ಕೆಲವು ಕಾಲ ಗೊಂದಲದ ವಾತಾವರ ನಿರ್ಮಾಣವಾಗಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎದುರಿಗೆ ನಿಂತ ಕಾರಿಗೆ ಟ್ರ್ಯಾಕ್ಟರ್ ಟ್ರೈಲರ್ ಡಿಕ್ಕಿ ಹೊಡೆದು, ಕಾರಿಗೆ ಹಾನಿ ಸಂಭವಿಸಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ

ರಜೌರಿಯಲ್ಲಿ ಗುಂಡಿನ ಚಕಮಕಿ: ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ

Zameer Ahmed Khan ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಪೊಲೀಸರ ದಾಳಿ

About The Author