International News: ಇಸ್ರೇಲ್ ಹಮಾಸ್ ಯುದ್ಧದ ನಡುವೆ 4 ದಿನಗಳ ಕದನ ವಿರಾಮವಿದ್ದು, ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಯಾವುದೇ ಯುದ್ಧ ನಡೆಯುವುದಿಲ್ಲ. ಈ 4 ದಿನಗಳಲ್ಲಿ ಇಸ್ರೇಲ್ 150 ಪ್ಯಾಲೇಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಹಮಾಸ್ 50 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಬಿಡುಗಡೆಯಾಗಬೇಕಾದ ಇಸ್ರೇಲ್ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಗುಪ್ತಚರ ಸಂಸ್ಥೆ, ಮೊಸಾದ್‌ಗೆ ಹಸ್ತಾಂತರಿಸಲಾಗಿದೆ ಎಂದು, ಈ ಕದನ ವಿರಾಮದ ಮಧ್ಯಸ್ತಿಕೆ ವಹಿಸಿರುವ, ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ.
ಅಕ್ಟೋಬರ್ 7ರಂದು ರಾಕೇಟ್ ದಾಳಿ ಮಾಡುವ ಮೂಲಕ, ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿ, ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊಂದಿತ್ತು. ಬಳಿಕ ಇಸ್ರೇಲ್ ಇದರ ಪ್ರತೀಕಾರವಾಗಿ, ದಾಳಿ ಮಾಡಿ, 13 ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರು ಮತ್ತು ಪ್ಯಾಲೇಸ್ತಿನ್ ನಾಗರಿಕರ ಹತ್ಯೆ ಮಾಡಿತ್ತು. ಇದೀಗ ಇಬ್ಬರ ಯುದ್ಧದ ನಡುವೆ ಕದನ ವಿರಾಮ ನಡೆದಿದ್ದು, ಒತ್ತೆಯಾಳಾಗಿದ್ದ ಇಸ್ರೇಲ್‌ನ 50 ಜನ ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಬಿಡುಗಡೆ ಮಾಡಲು ಒಪ್ಪಿದೆ. ಇದರ ಬದಲಾಗಿ ಪ್ಯಾಲೇಸ್ತಿನ್‌ನ 150 ಮಹಿಳಾ ಮತ್ತು ಅಪ್ರಾಪ್ತ ಖೈದಿಗಳನ್ನು ಬಿಡುಗಡೆ ಮಾಡಲು, ಹಮಾಸ್ ಒಪ್ಪಿದೆ.
ಭಾರತಕ್ಕೆ ಇಸ್ರೇಲ್ ಬೆಂಬಲ: ಮುಂಬೈ ಸ್ಪೋಟದ ರೂವಾರಿ ಲಷ್ಕರ್ ಉಗ್ರ ಸಂಘಟನೆ ನಿಷೇಧ
ಇಸ್ರೇಲ್ ಜೊತೆ ಆದಷ್ಟು ಬೇಗ ಕದನ ವಿರಾಮ ಎಂದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್
ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು: ಇಸ್ರೇಲ್ನಿಂದ ವೀಡಿಯೋ ರಿಲೀಸ್


