Tumakuru Political News: ತುಮಕೂರು: ತುಮಕೂರಿಗೆ ಭೇಟಿ ನೀಡಿದ ವಿ. ಸೋಮಣ್ಣ, ಸಿದ್ಧಗಂಗಾ ಮಠದ ಹಳೇ ಮಠದಲ್ಲಿರುವ ಗುರುಭವನ ಕಟ್ಟಡ ವೀಕ್ಷಣೆ ಮಾಡಿದರು. ಇವರಿಗೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟರು. ಈ ವೇಳೆ ಇಂಜಿನಿಯರ್ ಬಳಿ ಮಾತನಾಡಿದ ಸೋಮಣ್ಣ, ಕೆಲಸ ಪೆಂಡಿಂಗ್ ಇಟ್ಟಿದ್ದಿಯಲ್ಲಪ್ಪಾ ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಸೋಮಣ್ಣ, ನಾನೊಬ್ಬ ಶ್ರೀ ಮಠದ ಭಕ್ತ. ನನಗೂ ದೊಡ್ಡ ಗುರುಗಳಿಗೂ ಅವಿನಾಭವ ಸಂಬಂಧ. 44 ವರ್ಷಗಳಿಗೂ ಅಧಿಕ ಶ್ರೀ ಮಠದ ಆಶೀರ್ವಾದ ಪಡೆದಿದ್ದೇನೆ. ಹಿಂದೆ ಶ್ರೀಗಳು ಕಟ್ಟಡ ನಿರ್ಮಾಣದ ಆಶಯ ವ್ಯಕ್ತಪಡಿಸಿದ್ರು. 6 ನೇ ತಾರೀಕು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಶ್ರೀಮಠಕ್ಕೆ ಕಟ್ಟಡ ಹಸ್ತಾಂತರ ಮಾಡುತ್ತೇವೆ. ಬೇರೆ ಮಠದ ಮಠಾಧೀಪತಿಗಳು ಬಂದಾಗ ಉಳಿದುಕೊಂಡು ಪೂಜೆ ಮಾಡಲು ಅನಾನೂಕೂಲವಿದೆ ಅಂತ ದೊಡ್ಡ ಶ್ರೀಗಳು ಹೇಳುತ್ತಿದ್ದರು. ಪೂರ್ವಜನ್ಮದ ಪುಣ್ಯ ನಮ್ಮ ಕುಟುಂಬಕ್ಕೆ ಲಭಿಸಿದೆ ಎಂದು ಹೇಳಿದರು..
ಯಾವುದೇ ಕಾರ್ಯಕ್ರಮ ಮಠದಲ್ಲಿ ಮಾಡುವಾಗ ಆ ಭಾಗದ ಜನಪ್ರತಿನಿಧಿಗಳನ್ನು ಕರೆಯುವ ವಾಡಿಕೆಯಿದೆ. 44 ವರ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಸಿದ್ದಗಂಗಾ ಮಠದಲ್ಲಿ ಮಾಡಿದ್ದೇವೆ. ಇಲ್ಲಿ ಇಬ್ಬರು ಸಚಿವರರಿದ್ದಾರೆ, ಸಂಸದರಿದ್ದಾರೆ, ಇಬ್ಬರು ಶಾಸಕರಿದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇನೊಬ್ಬ ವಿಧಾನ ಪರಿಷತ್ ಸದಸ್ಯರಿದ್ದಾರೆ. ರಾಜಣ್ಣ ಮಗ ರಾಜೇಂದ್ರ ವಿಧಾನ ಪರಿಷತ್ ಸದಸ್ಯರಿದ್ದಾರೆ. ಅವರನ್ನು ಕರೆದಿರಲಿಲ್ಲ, ಬಿಟ್ಟಿದ್ದೇವೆ. ಅವರಿಗೆ ಆಮಂತ್ರಣ ನೀಡಿ ತಪ್ಪಾಯ್ತು ಅಂತ ಹೇಳಿ ಬನ್ನಿ ಅಂತ ಹೇಳಿದ್ದೇವೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಪಕ್ಷದವರಿಗೆ ಇರಬಹುದು, ಹೊರಗಿನವರು ಇರಬಹುದು ಎಲ್ಲಾರಿಗೂ ಸಮಾನತೆ ನೀಡಿದೆ ಸಿದ್ದಗಂಗಾ ಮಠ ಎಂದಿದ್ದಾರೆ.
ಅಲ್ಲದೇ, ನಮ್ಮ ಅಲ್ಪಸ್ವಲ್ಪ ತಪ್ಪುಗಳನ್ನು ತಿದ್ದುಕೊಳ್ಳಲು ಈ ಕೆಲಸಗಳನ್ನು ಮಾಡುತ್ತಿದ್ದೇವೆ. ಜನ ಎಷ್ಟು ಸೇರುತ್ತಾರೆ ಗೊತ್ತಿಲ್ಲ. ನಾನು ಇವತ್ತು ಎರಡು ಇನ್ವಿಟೇಷನ್ ಕೊಟ್ಟಿದ್ದೇನೆ. ಶ್ರೀಗಳಿಗೆ, ನಮ್ಮ ನಾಯಕರಾದ ಜಿ.ಎಸ್ ಬಸವರಾಜುಗೆ ಕೊಟ್ಟಿದ್ದೇನೆ. ನಾಳೆದು ಕೇರಳ ಹೋಗ್ತೀನಿ, ವಾಪಸ್ ಬರೋದು 1 ನೇ ತಾರೀಕು. 4,5 ಚಾಮರಾಜನಗರದಲ್ಲಿ ಇರುತ್ತೇನೆ. 6 ನೇ ತಾರೀಕು ಬರುತ್ತೇನೆ. ಇದು ಪವಿತ್ರ ಕಾರ್ಯಕ್ರಮ , ರಾಜಕೀಯ ಲೇಪ ಬರೆಸುವುದು ಸಮಂಜಸ ಅಲ್ಲ ಎಂದಿದ್ದಾರೆ.
ನಿನ್ನೆ ರಾತ್ರಿ ಒಂದೇರಡು ಮಾಹಿತಿಗಳು ಸಿಕ್ಕಿದ್ವು. ಸಂದೇಶ ಬಂದಿದೆ. 7,8,9,10 ತಾರೀಕಿನಂದು ದೆಹಲಿಗೆ ಹೋಗುತ್ತಿದ್ದೇನೆ. ನಾನು, ಯತ್ನಾಳ್ , ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ, ಐದಾರು ಜನ ಒಟ್ಟಿಗೆ ಹೋಗಿ. ಅವರನ್ನು ಭೇಟಿ ಮಾಡುವ ತೀರ್ಮಾನ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾರನ್ನು ಭೇಟಿ ಮಾಡಿ ಏನ್ ಹೇಳ್ಬೇಕೊ ಹೇಳ್ತೀವಿ. ಅದಾದ ಬಳಿಕ ಮಾಧ್ಯಮದ ಮುಂದೆ ಮಾತನಾಡುತ್ತೇನೆ. ಅಸಮಧಾನಿತರ ಗುಂಪು ಅಂತ ಅಲ್ಲ. ಸ್ವತಂತ್ರವಾಗಿ ತಮ್ಮ ತಮ್ಮ ಕರ್ತವ್ಯ ಮಾಡುತ್ತೇವೆ. ಸಿನಿಯಾರಿಟಿಗಿಂತ ನಮಗೂ ಅನೇಕ ಅನುಭವಗಳಿವೆ. ನಮ್ಮದೇ ಆದ ಶಕ್ತಿಯಿದೆ. ನಮ್ಮದೇ ಆದ ದೂರದೃಷ್ಟಿ ಚಿಂತನೆಗಳಿವೆ. ಇದನ್ನು ಹೇಳಲೇ ಬೇಕು. ಮಗು ಅತ್ತರೆ ತಾಯಿ ಹಾಲು ಕೊಡೊದು. ಮಗು ಅಳದೆ ಇದ್ದರೆ ಏನು ತೊಂದರೆಯಿಲ್ಲ ಅನ್ತಾರೆ. ಪಕ್ಷನ್ನು ಬೆಳೆಯಬೇಕು, ಸಾರ್ವಜನಿಕರಿಗೂ ಅನುಕೂಲವಾಗಬೇಕು. ಎಲ್ಲೋ ಒಂದು ಕಡೆ ಟೇಕ್ ಇಟ್ ಗ್ರ್ಯಾಂಟೆಡ್ ಮಾಡಿಕೊಳ್ಳೊದ್ರಲ್ಲಿ ಅರ್ಥವಿಲ್ಲ. ಎಲ್ಲಾವೂ ನನ್ನದೇ ಅನ್ನೋದಕ್ಕೂ ಅವಕಾಶವಿಲ್ಲ. ಯಾರಿಗೆ ತಿಳಿಸಬೇಕೊ ತಿಳಿಸುತ್ತೇವೆ ಎಂದಿದ್ದಾರೆ.
‘ಲೂಟಿ ಮಾಡುವವರಿಗೆ ಕೊಳ್ಳೆ ಹೊಡೆಯುವವರಿಗೆ ನಮ್ಮ ಸರ್ಕಾರ ಎಂಬುದನ್ನ ನಿರೂಪಿಸಿದ್ದಾರೆ’
‘ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್’