Bengaluru News: ಜನ್ಮಭೂಮಿ ಸಾಂಸ್ಕೃತಿಕ ನಾಗರಿಕ ವೇದಿಕೆ ವತಿಯಿಂದ, ಕನ್ನಡ ಹಬ್ಬದ ಪ್ರಯುಕ್ತ 24 ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ, ಕರ್ನಾಟಕ ಟಿವಿಗೆ ಮಾಧ್ಯಮ ರತ್ನ ಪ್ರಶಸ್ತಿ ಒಲಿದು ಬಂದಿದೆ.
ಬೆಂಗಳೂರಿನ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿರುವ, ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ಮಾಧ್ಯಮ ರತ್ನ, ಆದರ್ಶ ರತ್ನ, ಶಿಕ್ಷಕ ರತ್ನ ಸೇರಿ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಜನ್ಮಭೂಮಿ ಸಾಂಸ್ಕೃತಿಕ ನಾಗರಿಕ ವೇದಿಕೆ ಅಧ್ಯಕ್ಷರಾಗಿರುವ ಕೃಷ್ಣಪ್ಪನವರ ನೇತೃತ್ವದಲ್ಲಿ ಈ ಸಮಾರಂಭ ನಡೆದಿದೆ. ಸಮಾರಂಭದಲ್ಲಿ ಈ ಬಾರಿ ಕರ್ನಾಟಕ ಟಿವಿ, ಮಾಧ್ಯಮ ರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಕರ್ನಾಟಕ ಡಿಜಿಟಲ್ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಲ್ಲೇಶ್ವರಂನ ಶಾಸಕ, ಸಿ.ಎನ್.ಅಶ್ವತ್ಥ ನಾರಾಯಣ ಈ ಪ್ರಶಸ್ತಿ ಪ್ರಧಾನ ಮಾಡಿದ್ದು, ಪ್ರತೀ ವರ್ಷದಂತೆ, ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕರು ಮತ್ತು ಹಿರಿಯರನ್ನು ಕರೆಸಿ, ಯುವಕರಿಗೆ ಪ್ರೇರೇಪಣೆ ಸಿಗುವ ರೀತಿಯಲ್ಲಿ, ಹಿರಿಯ ಸಾಧಕರಂತೆ, ತಾವೂ ಸಾಧನೆ ಮಾಡಲಿಕ್ಕೋಸ್ಕರ, ಹಳೆಯ ಬೇರು, ಹೊಸ ಚಿಗುರು ಎನ್ನುವಂಥ ರೀತಿಯಲ್ಲಿ, ನಿಮ್ಮನ್ನು ಒಟ್ಟಿಗೆ ತರುವಂಥ ಪ್ರಯತ್ನ ಮಾಡುತ್ತಿದ್ದಾರೆ ಎಂದರು.