ಹುಬ್ಬಳ್ಳಿ-ಧಾರವಾಡ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕಮಿಷನರ್ ರೇಣುಕಾ ಸುಕುಮಾರ್

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್ ನಡೆದಿದ್ದು, ನಟೋರಿಯಸ್ ರೌಡಿ ಕಾಲಿಗೆ, ಪೊಲೀಸರು ಗುಂಡು ಹಾರಿಸಿದ್ದಾರೆ.

ಘಟನೆ ಹಿನ್ನೆಲೆ ಆಸ್ಪತ್ರೆಗೆ ರೇಣುಕಾ ಸುಕುಮಾರ್ ಭೇಟಿ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಮಿಷ್‌ನರ್ ರೇಣುಕಾ ಸುಕುಮಾರ್ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಅಧಿಕಾರಿ, ಆರೋಪಿ ಮೇಲೆ ಐದು ಪ್ರಕರಣಗಳಿವೆ. ಈತ ನಟೋರಿಯಸ್ ರೌಡಿ ಶೀಟರ್. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಇತ್ತು. ಎರಡು ವರ್ಷಗಳಿಂದ ಆರೋಪಿ ಸತೀಶ್ ಗೋನಾ ತಲೆ ಮರೆಸಿಕೊಂಡಿದ್ದ. ಪುಡಿ ರೌಡಿ, ನಟೋರಿಯಸ್ ರೌಡಿಗಳ ಮೇಲೆ ಬಿಗಿ ಹಿಡಿತ ಇಟ್ಟಿದ್ದೀವಿ. ವಾರೆಂಟ್ ಕಾರ್ಯಗತ ಮಾಡಲು ಪೊಲೀಸರು ಹೋಗಿರ್ತಾರೆ. ಆಗ ಅಲ್ಲಿ ತಲ್ವಾರ್ ಸಿಗುತ್ತೆ ಅದನ್ನ ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಳ್ತೀವೆ. ರಾತ್ರಿ 9 ಗಂಟೆ ಸುಮಾರಿಗೆ ಸ್ಥಳ ಮಹಜರ್ ಮಾಡೋಕೆ ಪೊಲೀಸರು ತೆರಳಿದ್ದರು.

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ತೆರಳಿತ್ತು. ಪಿಎಸ್ಐ ವಿನೋದ ಮೇಲೆ ಕಲ್ಲಿನಿಂದ ದಾಳಿ ಆರೋಪಿ ಮಾಡಿದ್ದ. ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಮೂರು ಸುತ್ತಿನ ಗುಂಡು ಹಾರಿಸಿದ್ದರು. ಗಾಳಿಯಲ್ಲಿ ಎರಡು ಹಾರಿಸಿ, ಒಂದು ಗುಂಡು ಕಾಲಿಗೆ ಹಾರಿಸಿದ್ದರು ಹುಬ್ಬಳ್ಳಿಯ ಮಂಟೂರ್ ರೋಡ್ ನಲ್ಲಿ ಫೈರಿಂಗ್ ಆಗಿದೆ ಎಂದು ಹೇಳಿದ್ದಾರೆ.

‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’

ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ

ಸೋಮಣ್ಣರಿಗೆ ನಾನು ಸಪೋರ್ಟ್ ಮಾಡ್ತೀನಿ: ಸಂಸದ ಜಿ.ಎಸ್.ಬಸವರಾಜ್

About The Author