Monday, December 23, 2024

Latest Posts

ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?

- Advertisement -

Political News:ಬೆಂಗಳೂರು: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ, ಜನತಾ ದರ್ಶನ ಮಾಡಿದ್ದು, ಹಲವರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇನ್ನು ಕೆಲವರ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ, ಬಗೆಹರಿಸಲು ಹೇಳಿದ್ದಾರೆ.

ಮಧ್ಯಾಹ್ನ ಊಟದ ಹೊತ್ತಿಗೆ, ಸಿಎಂ ಜನತಾ ದರ್ಶನ ಮಾಡುವಾಗ, ಅಧಿಕಾರಿಯೋರ್ವರ ಅಗತ್ಯವಿತ್ತು. ಆ ಅಧಿಕಾರಿ ಎಲ್ಲಿ ಎಂದು ಸಿಎಂ ಕೇಳಿದ್ದಾರೆ. ಆದರೆ ಆ ಅಧಿಕಾರಿ ಊಟಕ್ಕೆ ಹೋಗಿದ್ದು, ಅವರು ಊಟಕ್ಕೆ ಹೋಗಿದ್ದಾರೆ ಎಂದು, ಇನ್ನೋರ್ವರು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಿಎಂ, ನಾನೇ ಊಟಕ್ಕೆ ಹೋಗದೇ, ಹಸಿದುಕೊಂಡು ಹೋಗಿದ್ದೇನೆ. ಅವ್ನು ಊಟಕ್ಕೆ ಹೋದ್ನಾ ಎಂದು ಕೋಪಗೊಂಡಿದ್ದಾರೆ.

ಅಲ್ಲದೇ, ಜನತಾದರ್ಶನ ಮುಗಿಯುವವರೆಗೂ ಯಾರೂ ಊಟಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ, ಊಟಕ್ಕೆ ಹೋದರೆ, ಸಮಯ ವ್ಯರ್ಥವಾಗುತ್ತದೆ ಎಂದು, ತಾವು ಎಲ್ಲಿ ಕುಳಿತು ಜನತಾ ದರ್ಶನ ಮಾಡುತ್ತಿದ್ದರೋ, ಅಲ್ಲೇ ಊಟ ತರಿಸಿಕೊಂಡು, ಸಿಎಂ ಸಿದ್ದರಾಮಯ್ಯ ಊಟ ಮಾಡಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಕೂಡ ಮಾಡಿದ್ದು, ಇಂದಿನ ಜನತಾ ದರ್ಶನದಲ್ಲಿ ಅಹವಾಲು ಹೊತ್ತು ಬಂದವರ ಸಂಖ್ಯೆ ಬಹಳಷ್ಟಿದೆ. ದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿಕೊಡಬೇಕಾದುದ್ದು ನನ್ನ ಕರ್ತವ್ಯ. ಹೀಗಾಗಿ ಊಟಕ್ಕೆ ಹೋಗಿ ಬರುವ ಸಮಯವನ್ನು ಉಳಿಸಿ, ಆ ಸಮಯವು ಮತ್ತಷ್ಟು ಜನರ ಕಷ್ಟ ಕೇಳಲು ಸದ್ಬಳಕೆಯಾಗಲಿ ಎಂದು ಜನತಾ ದರ್ಶನಕ್ಕೆ ಕುಳಿತಿದ್ದ ಜಾಗದಲ್ಲೇ ಬೇಗನೆ ಊಟ ಮಾಡಿ ಮುಗಿಸಿ ಮತ್ತೆ ಜನರ ಅಹವಾಲಿಗೆ ಕಿವಿಯಾಗಿದ್ದೇನೆ ಎಂದಿದ್ದಾರೆ.

2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ

ಆಸ್ತಿ ಬರೆಯಿಸಿಕೊಂಡು ತಾಯಿಗೆ ಮೋಸ ಮಾಡಿದ ಮಗ: ಸಿಎಂಗೆ ದೂರು

ಸೋಮಣ್ಣ ಬಿಜೆಪಿಗೆ ಹೋಗಿದ್ದೇ ವಿಸ್ಮಯ : ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss