Saturday, November 29, 2025

Latest Posts

‘ರಾಜ್ಯಕ್ಕೆ ಮಾರಿಯಾಗಿರುವ ಕಾಂಗ್ರೆಸ್ ಪಕ್ಕದೂರಿಗೆ ಉಪಕಾರಿಯಾಗಿ ಪೋಸ್ ಕೊಡುತ್ತಿರುವುದು ಕರ್ನಾಟಕದ ದುರಂತವೇ ಸರಿ’

- Advertisement -

Political News: ಕಾಂಗ್ರೆಸ್ ಸರ್ಕಾರ ತೆಲಂಗಾಣದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವ ಸಂತೋಷ್ ಲಾಡ್ ಸೇರಿ, ಪ್ರಮುಖ ಸಚಿವರು ತೆಲುಗು ನಾಡಲ್ಲಿ ಚುನಾವಣೆ ಗೆಲ್ಲಲು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷದ ಬಗ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಬೊಕ್ಕಸ ಬರಿದು ಮಾಡಿ ಕನ್ನಡಿಗರ ಪಾಲಿಗೆ ಹೆಮ್ಮಾರಿಯಾಗಿರುವ ಕಾಂಗ್ರೆಸ್ ಸರ್ಕಾರ ಪಕ್ಕದೂರಿಗೆ ಉಪಕಾರಿಯಾಗುವ ಫೋಸ್ ಕೊಡಲು ಹೊರಟಿರುವುದು ಕರ್ನಾಟಕದ ದುರಂತವೇ ಸರಿ.

ಒಂದು ಕಡೆ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲದೆ ಜನರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ತೆಲಂಗಾಣ ರಾಜ್ಯದ ದಿನಪತ್ರಿಕೆಗಳಲ್ಲಿ ಜಾಹೀರಾತು ಕೊಡಲು ರಾಜ್ಯದ ಬೊಕ್ಕಸ ದುರ್ಬಳಕೆ ಮಾಡಿಕೊಂಡು ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿದೆ.

ಗ್ಯಾರೆಂಟಿಗಳನ್ನು ಜಾರಿ ಮಾಡಲಾಗದೆ ದಿನಕ್ಕೊಂದು ಕುಂಟು ನೆಪ, ನೂರೆಂಟು ಕಂಡೀಷನ್ ಹಾಕಿ ಕನ್ನಡಿಗರಿಗೆ ಮೋಸ ಮಾಡಿರುವ ಕಾಂಗ್ರೆಸ್ ಪಕ್ಷ, ಎಲ್ಲಾ 5 ಗ್ಯಾರೆಂಟಿಗಳನ್ನೂ ಚಾಚೂ ತಪ್ಪದೆ ಜಾರಿ ಮಾಡಿಬಿಟ್ಟಿದ್ದೇವೆ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಜಾಹೀರಾತು ನೀಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದೆ ಎಂದು ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

‘ಚುನಾವಣಾ ಸಮಯದಲ್ಲಿ ಇನ್ನೂ ಏನೇನು ಆಗುತ್ತೆ ವೆಟ್ ಆ್ಯಂಡ್ ಸಿ’

40% ಕಮಿಷನ್ ಕುರಿತು ನ್ಯಾಯಮೂರ್ತಿಗಳಿಗೆ ದಾಖಲೆ ಸಲ್ಲಿಸಿದ ಕೆಂಪಣ್ಣ!

ಅಂಬಿಕಾಪತಿ ಸಾವಿಗೆ ಬಿಜೆಪಿ ಸರ್ಕಾರದ ಶಾಸಕರೇ ಕಾರಣ: ಕೆಂಪಣ್ಣ

- Advertisement -

Latest Posts

Don't Miss