Friday, July 11, 2025

Latest Posts

ಮದುವೆಗೆ ಒಪ್ಪದ್ದಕ್ಕೆ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಅಪಹರಣ

- Advertisement -

Hassan News: ಹಾಸನ : ಹಾಸನದಲ್ಲಿ ಸಿನಿಮೀಯ ರೀತಿಯಲ್ಲಿ ಶಿಕ್ಷಕಿಯ ಅಪಹರಣವಾಗಿದೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಈ ಘಟನೆ ನಡೆದಿದ್ದು, ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನು ಅಪಹರಿಸಲಾಗಿದೆ.

ಪ್ರತಿದಿನ ಬೆಳಿಗ್ಗೆ ಯಾವ ಸಮಯಕ್ಕೆ ಶಿಕ್ಷಕಿ ಅರ್ಪಿತಾ ಶಾಲೆಗೆ ಹೋಗುತ್ತಾರೋ, ಅದಕ್ಕಿಂತ ಕೆಲ ನಿಮಿಷ ಮುಂಚೆಯೇ ಅಪಹರಣಕಾರರು ಮನೆಯ ಬಳಿ ಬಂದು ಕಾದು ನಿಂತಿದ್ದಾರೆ. ಆಕೆ ಹೊರಡುತ್ತಿದ್ದಂತೆ, ಕಾರ್‌ನಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಣದ ದೃಶ್ಯ, ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಈ ಕೃತ್ಯ ಎಸಗಿದ್ದು ಎಂದು ಅಂದಾಜಿಸಲಾಗಿದ್ದು, ಈತ ತನ್ನ ಪೋಷಕರೊಂದಿಗೆ ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಬಂದಿದ್ದ. ಆದರೆ ಇವನ ಮದುವೆ ಪ್ರಸ್ತಾಪವನ್ನು ಅರ್ಪಿತಾ ಮತ್ತು ಆಕೆಯ ಕುಟುಂಬ ಸದಸ್ಯರು ವಿರೋಧಿಸಿದ್ದರು.

ಮದುವೆ ಮಾಡಿಕೊಡಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ಕಿಡ್ನಾಪ್ ಮಾಡಿರೊ ಆರೋಪ ಕೇಳಿಬಂದಿದ್ದು, ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..

ಕಾಂಗ್ರೆಸ್ ಭಿನ್ನಮತ ಸರಿಮಾಡುವ , ಸಂಭಾಳಿಸುವ ನೇತೃತ್ವ ಇಲ್ಲ: ಪ್ರಹ್ಲಾದ್ ಜೋಶಿ

ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ..?- ಶೆಟ್ಟರ್

- Advertisement -

Latest Posts

Don't Miss