Political News: ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಸದಾನಂದಗೌಡ ಮಾತನಾಡಿದ್ದು, 4 ರಾಜ್ಯಗಳಲ್ಲಿ ಮೂರನ್ನ ಗೆದ್ದೇ ಗೆಲ್ಲುತ್ತೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮೈನಾರಿಟಿ ವೋಟ್ ಗಳನ್ನ ಖರೀದಿ ಮಾಡಿದೆ. ನಮ್ಮ ರಾಜ್ಯದ ಹಣವನ್ನು ಬಾಕ್ಸ್ ಗಳಲ್ಲಿ ತೆಲಂಗಾಣಕ್ಕೆ ಸಾಗಿಸಿತ್ತು. ಈ ಹಣದ ಮೂಲಕ ತೆಲಂಗಾಣ ಕಾಂಗ್ರೆಸ್ ಮೈನಾರಿಟಿ ವೋಟ್ ಗಳನ್ನ ಖರೀದಿ ಮಾಡಿತ್ತು. ಅದರಿಂದ ತೆಲಂಗಾಣದಲ್ಲಿ ಮುನ್ನಡೆ ಸಾಧಿಸಿದೆ ಎಂದಿದ್ದಾರೆ.
ಮೋದಿ ವರ್ಚಸ್ ಕುಗ್ಗಿದೆ ಅನ್ನೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡರು, ಮುಖಕ್ಕೆ ಪೌಡರ್ ಹಚ್ಚಿ ಬಂದಿರೋ ವರ್ಚಸ್ ಅಲ್ಲ ಅದು. ಹೀಗಾಗಿ ಕುಗ್ಗುವ ಡಲ್ ಆಗುವ ವರ್ಚಸ್ ಅಲ್ಲ ಅದು. ಛತ್ತೀಸ್ ಘಡ್ ನಲ್ಲೂ ನಾವೇ ಗೆಲ್ಲುತ್ತೇವೆ.
ಛತ್ತೀಸ್ ಘಡ್ ನಂತಹ ನಕ್ಸಲ್ ಪೀಡಿತ ಪ್ರದೇಶ ಕೂಡ ಬಿಜೆಪಿ ಆಡಳಿತ ಬಯಸಿದೆ. ಈ ರಾಜ್ಯಕ್ಕೆ ಶಾಂತಿ ಸುವ್ಯವಸ್ಥೆ ಬೇಕು. ಅದಕ್ಕಾಗಿ ಬಿಜೆಪಿ, ಮೋದಿ ಆಡಳಿತ ಬಯಸಿದ್ದಾರೆ ಇಲ್ಲಿನ ಜನ. ಎಲ್ಲಾ ರಾಜ್ಯಗಳಲ್ಲಿ ಗೆದ್ದಿದ್ರೆ, ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಿದ್ದೀದ್ರು.. ಈಗ ಗೆದ್ದಿಲ್ಲ ಹಾಗೆ ಹೇಳಲ್ಲ, ಅವರ ಅನುಕೂಲಕ್ಕೆ ತಕ್ಕಂತೆ ಮಾತನಾಡೋದು ಕಾಂಗ್ರೆಸ್ ಗೆ ಪಾಠವಾಗಿದೆ ಎಂದು ಹೇಳಿದ್ದಾರೆ.
ಇನ್ನು ಮಧ್ಯಪ್ರದೇಶ, ರಾಜಸ್ಥಾನ ಗೆಲುವಿನ ಗುಟ್ಟು ಬಿಚ್ಚಿಟ್ಟ ಸದಾನಂದಗೌಡರು, ಈ ಹಿಂದೆ ಈ ಎರಡು ರಾಜ್ಯಗಳಲ್ಲಿ ನಮ್ಮಲ್ಲೇ ಆಂತರಿಕ ಕಚ್ಚಾಟ ಇತ್ತು. ಇದನ್ನ ಬಿಟ್ಟು ನಮ್ಮ ನಾಯಕರು ಕೆಲಸ ಮಾಡಿದ್ರು. ಅದಕ್ಕೆ ನಮಗೆ ಈ ದೊಡ್ಡ ಜಯ ಸಿಕ್ಕಿದೆ. ಯಾವುದೇ ಅನುಮಾನ ಇಲ್ಲ 3 ರಾಜ್ಯಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




