Political News: ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜನರಿಗೆ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡುತ್ತಾರಾ ಎಂಬ ನಿರೀಕ್ಷೆ ಈ ಭಾಗದ ಜನರಿಗೆ ಇದೆ ಹಾಗೂ ವಿರೋಧ ಪಕ್ಷವಾದ ನಮ್ಮಲ್ಲೂ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಇಲ್ಲೇ ಪರಿಹಾರ ನೀಡಬೇಕು ಎಂಬ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಈ ಭಾಗದ ರೈತರಿಗೆ ಬಡವರಿಗೆ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಸುವರ್ಣಸೌಧ ಕಟ್ಟಲಾಗಿದೆ. ಉತ್ತರ ಕರ್ನಾಟಕದ ಜನತೆ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ ಎಂದರು.
ಬರಗಾಲದಿಂದ ರೈತರು ಸಂಕಷ್ಟ ದಲ್ಲಿ ಇದ್ದಾರೆ. ರೈತರು ಈ ಅಧಿವೇಶನವನ್ನು ಸಾಕಷ್ಟು ಎದುರು ನೋಡುತ್ತಿದ್ದಾರೆ. ಕಬ್ಬು ಬೆಳೆಗಾರರು ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ ಪರಿಹಾರಕ್ಕಾಗಿ ಅವರು ಕೂಡಾ ಎದುರು ನೋಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ದಿನಕಳೆದಂತೆ ಅವುಗಳು ಹುಸಿಯಾಗುತ್ತಿವೆ. ಬೆಳಗಾವಿ ಅಧಿವೇಶನದ ಮೂಲಕ ಉತ್ತರ ಕರ್ನಾಟಕ ಜನರಿಗೆ ಬಡವರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಬೇಕು ಎಂದು ಹೇಳಿದರು.
ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಸದನದಲ್ಲಿ ನಾಡಿದ ಜನರ ಪರವಾಗಿ ಧ್ವನಿ ಎತ್ತಲಿದೆ.
ಇಂಡಿಯಾ ಮೈತ್ರಿ ಕೂಟ ಬಂದ ಬಳಿಕ ದೇಶದಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಆದರೆ ನಿನ್ನೆಯ ಫಲಿತಾಂಶ ಹೊಸ ಶಕ್ತಿ ತಂದುಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಪೊಳ್ಳು ಗ್ಯಾರಂಟಿಗಳನ್ನು ದೇಶದ ಜನರು ನಂಬಲು ತಯಾರಿಲ್ಲ. ಜನರಿಗೆ ಬೇಕಾಗಿರುವುದು ದೇಶದ ರಕ್ಷಣೆ ಗ್ಯಾರಂಟಿ. ಹಾಗೂ ಅಭಿವೃದ್ಧಿಯ ಗ್ಯಾರಂಟಿ ಅದು ಮೋದಿಯಿಂದ ಮಾತ್ರ ಸಾಧ್ಯ ಎಂದು ದೇಶದ ಜನರಿಗೆ ತಿಳಿದಿದೆ ಎಂದರು.
ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ : ಸಚಿವ ಜಮೀರ್ ಅಹ್ಮದ್ ಖಾನ್
ಬಿಜೆಪಿ ಬಿಟ್ಟು ಹೋಗಲ್ಲ: ಫಲಿತಾಂಶದ ಬೆನ್ನಲ್ಲೇ ಎಸ್.ಟಿ.ಸೋಮಶೇಖರ್ ಯೂಟರ್ನ್?
ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಯಶ್: ಡಿ.8ಕ್ಕೆ ಹೊಸ ಸಿನಿಮಾ ಟೈಟಲ್ ಘೋಷಣೆ




