ವಂಚನೆ ಪ್ರಕರಣ: ಕುಂದಾಪುರದ ಚೈತ್ರಾಗೆ ಜಾಮೀನು ಮಂಜೂರು! ಇಂದು ಬಿಡುಗಡೆ

Bengaluru News: ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಮುಖ ಆರೋಪಿ ‌ಕುಂದಾಪುರದ ಚೈತ್ರಾಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಆಕೆ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾಳೆ. ಆಕೆಯ ಜತೆ ಸಹ ಆರೋಪಿ ಶ್ರೀಕಾಂತ್‌ ಕೂಡಾ ಬಿಡುಗಡೆಯಾಗಲಿದ್ದಾನೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಚೈತ್ರಾ ಮತ್ತು ತಂಡ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸಿಕ್ಕಿರಲಿಲ್ಲ. ಇದೀಗ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಎರಡು ಲಕ್ಷ ಬಾಂಡ್ ನೀಡುವಂತೆ ಸೂಚಿಸಿದೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿದೆ. ಆರೋಪಿಗಳಿಂದ ಈಗಾಗಲೇ ಅವರು ವಂಚನೆ ಮಾಡಿದ ಲಕ್ಷಾಂತರ ರೂ. ನಗದು, ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಸೆಪ್ಟೆಂಬರ್‌ 12ರ ರಾತ್ರಿ ಚೈತ್ರಾಳನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು. ಆಕೆಯ ಸಹಚರ ಗಗನ್‌ ಕಡೂರ್‌, ಪ್ರಜ್ವಲ್‌, ಶ್ರೀಕಾಂತ್‌ ಕೂಡಾ ಸೆರೆಯಾಗಿದ್ದರು. ಮುಂದೆ ಕಡೂರಿನ ರಮೇಶ್‌ ಮತ್ತು ಧನರಾಜ್‌ ಹಾಗೂ ಚೆನ್ನಾ ನಾಯ್ಕ್‌ ಸೆರೆಸಿಕ್ಕಿದ್ದರು. ಅದಾದ ಕೆಲವೇ ದಿನದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕಟಕ್‌ನಲ್ಲಿ ಬಂಧಿಸಲಾಗಿತ್ತು.

ಹುಬ್ಬಳ್ಳಿಯ ಬಾಷಾಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಯತ್ನಾಳ ಹಠಾವೋ ಆರಂಭಿಸುತ್ತೇವೆ: ಬಿಜೆಪಿ ವಕ್ತಾರರಿಂದ ಎಚ್ಚರಿಕೆ

ಠಾಣೆಯ ಆವರಣದಲ್ಲಿಯೇ ತಾಳಿ ಕಟ್ಟಿದ ಯುವಕ: ಜೈ ಶ್ರೀರಾಮ್ ಘೋಷಣೆ

About The Author