Political News: ಹಾಸನ: ರಾಜ್ಯಕ್ಕೆ ಕಾಂಗ್ರೆಸ್ ನೀಡಿರುವ ಜನಪರ ಯೋಜನೆಗಳು ಈ ಭಾರಿ ಲೋಕಸಭಾ ಚುನಾವಣೆ ಗೆಲುವಿಗೆ ಸಹಕಾರಿ ಆಗಲಿವೆ. ಹಾಸನದಲ್ಲಿ ಕೂಡ ಈ ಬಾರಿ ಕಾಂಗ್ರೆಸ್ ನ ಹಾಸನ ಲೋಕಸಭಾ ಸದಸ್ಯನ ಆಯ್ಕೆ ಖಚಿತ ಎಂದು ಕಾಂಗ್ರೆಸ್ ಮುಖಂಡ ಜತ್ತೆನಹಳ್ಳಿ ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಲೋಕಸಭಾ ಚುನಾವಣೆ ಆಕಾಂಕ್ಷಿ ಯಾಗಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣೆ ಸ್ಪರ್ಧೆ ಯಲ್ಲಿ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಮೊಮ್ಮಗ ಪ್ರತಿಸ್ಪರ್ಧಿ ಆದರೆ ಗೆಲುವು ಸಾಧ್ಯವೇ ಎಂಬ ಮಾತುಗಳು ಚರ್ಚೆ ಆಗುತ್ತಿವೆ, ಆದರೆ ಎದುರಾಳಿ ಇಂತಹ ಪ್ರಭಾವಿ ವ್ಯಕ್ತಿಗೆ ಆಗಿರಬಹುದು ಆದರೆ ಜನಸೇವಕ ನನ್ನು ಆಯ್ಕೆ ಮಾಡುವುದು ಜನರು ಎಂದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕೊಟ್ಟಿರುವ ಕೊಡುಗೆಗಳು ಅಪಾರ ಬಡವರ, ನೊಂದವರ ಪರವಾಗಿರುವ ಕಾಂಗ್ರೆಸ್ ಎಂದಿಗೂ ಸೇವೆ ಸಲ್ಲಿಸುತ್ತಿದೆ, ಅಭ್ಯರ್ಥಿ ಯಾರೇ ಆದರೂ ಅವರ ಪರವಾಗಿ ಕೆಲಸ ಮಾಡಿ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರನ್ನು ಆಯ್ಕೆ ಮಾಡಲು ಸಜ್ಜಾಗುವಂತೆ ಕರೆ ನೀಡಿದರು.
ಲೋಕಾಸಭಾ ಚುನಾವಣೆ ಸಮೀಪಿಸುತ್ತಿದೆ ತಾನು ಈ ವೇಳೆ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ ಯಾಗಿದ್ದು ಇದನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ತಿಳಿಸುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಆ ಮೂಲಕ ರಾಜ್ಯ ಹೈ ಕಮಾಂಡ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದು, ಅನೇಕ ಜನ ಆಕಾಂಕ್ಷಿಗಳು ಇರಬಹುದು ಆದರೆ ಪಕ್ಷ ತನ್ನನು ಪರಿಗಣಿಸುವ ನಿರೀಕ್ಷೆ ಇದೆ ಎಂದರು.
ಈ ಹಿಂದೆ ಕೂಡ ಅನೇಕ ಬಾರಿ ಟಿಕೆಟ್ ಆಕಾಂಕ್ಷಿ ಆಗಿದ್ದೆ, ಆದರೆ ಹಿರಿಯರು ಇದ್ದ ಕಾರಣ ಅವರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಹಿರಿಯರಿಗೆ ಅವಕಾಶ ಕಲ್ಪಿಸಲಾಗಿದೆ ಈ ಬಾರಿ ತನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಹಾಸನ ಜಿಲ್ಲೆಗೆ ಅನೇಕರು ಅಭ್ಯರ್ಥಿ ಆಗಲು ಸಿದ್ಧರಾಗಿದ್ದಾರೆ, ಆದರೆ ವರಿಷ್ಠರು ಅಂತಿಮ ತೀರ್ಮಾನ ಮಾಡಲಿದ್ದಾರೆ, ಆದರೆ ಯಾವುದೇ ಬೇಸರ ಇಲ್ಲದೆ ಎಲ್ಲಾ ಆಕಾಂಕ್ಷಿ ಗಳು ಬೇದ ಬಾವ ಮರೆತು ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕು ಎಂದರು.
ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಯ್ಕೆ ಆದ ನಂತರ ಅವರು ಸಂಪೂರ್ಣ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಡಿಸಿದ್ದಾರೆ ಆದರೆ ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಕೂಡ ಒಗ್ಗಟ್ಟಾಗಿ ಅವರ ಮಾತನ್ನು ಹುಸಿ ಗೊಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ಕೂಡ ಒಂದು ರೀತಿಯ ಭಯ ಶುರುವಾಗಿದೆ, ಆದುದರಿಂದ ಈ ಭಾರಿ.ಕಾಂಗ್ರೆಸ್ ನಿಂದಾ ಯಾರೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆದರೂ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುವ ಕೆಲಸ ಮಾಡೋಣ ಎಂದರು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ಮಾತನಾಡಿ, ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮುಖಂಡರು ಜಿಲ್ಲಾ ಕಾಂಗ್ರೆಸ್ ನಲ್ಲಿ ಇಲ್ಲ..
ಜಿಲ್ಲಾ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ ಇದರಿಂದಲೇ ಎಲ್ಲಾ ಚುನಾವಣೆಗಳಲ್ಲಿ ಸೋಲು ಕಾಣುವಂತೆ ಆಗಿದೆ, ನಮ್ಮಲ್ಲೇ ಒಗ್ಗಟ್ಟು ಇಲ್ಲದ ಕಾರಣ ಎಲ್ಲಾ ಚುನಾವಣೆ ಗಳಲ್ಲಿ ಸೋಲು ಅನುಭವಿಸುವಂತೆ ಆಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯ ಲ್ಲಿ ಯಾರೇ ಆಕಾಂಕ್ಷಿಗಳು ಇದ್ದರು ಅವರು ಅಧ್ಯಕ್ಷರ ನೇತೃತ್ವದಲ್ಲೇ ಸಭೆ ಕರೆಯಬೇಕು ಕಾಂಗ್ರೆಸ್ ನಲ್ಲಿ ಜಿಲ್ಲಾಧ್ಯಕ್ಷ ರು ಕೂಡ ಸ್ವಲ್ಪ ಚುರುಕು ಆಗಬೇಕು. ನಮ್ಮಲ್ಲಿ ಗುಂಪುಗಾರಿಕೆ ಬೇಡ ಪಕ್ಷ ಯಾರನ್ನೂ ಸೂಚಿಸುತ್ತದೆ ಅವರಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಅಭ್ಯರ್ಥಿ ಯಾರೇ ಆಗಿದ್ದರು ಅವರ ಗೆಲುವಿಗೆ ಶ್ರಮ ವಹಿಸುವ ಕೆಲಸ ಮಾಡಬೇಕು ಎಂದರು.
ಮಾಜಿ ಸಚಿವ ಗಂಡಸಿ ಶಿವರಾಂ ಮಾತನಾಡಿ, ರಾಮಚಂದ್ರ ಅವರು ಒಂದು ಒಳ್ಳೆಯ ಪದ್ಧತಿ ಅಳವಡಿಸಿಕೊಂಡು ಇಂದು ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ ಕರೆದು ಚರ್ಚೆ ಮಾಡಿದ್ದಾರೆ, ರಾಜ್ಯದಲ್ಲಿ ಇರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾದ ಹಾಸನ ಕ್ಷೇತ್ರದ ಗೆಲುವು ನಮ್ಮೆಲ್ಲರಿಗೂ ಸವಾಲು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಚುನಾವಣಾ ಉಸ್ತುವಾರಿ ಗಳು ಜಿಲ್ಲೆಯ ಪ್ರತಿ ತಾಲೂಕಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಶೀಘ್ರ ಅಭ್ಯರ್ಥಿ ಆಯ್ಕೆ ಮಾಡಬೇಕಿರುವುದು ಅನಿವಾರ್ಯ ಎಂದರು.
ಈಗಾಗಲೇ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಘೋಷಣೆ ಆಗಿದೆ, ಮೊದಲು ಜಾತ್ಯತೀತ ಹೆಸರು ಹೇಳಿಕೊಂಡು ಬಂದಿದ್ದ ಜೆಡಿಎಸ್ ಈಗ ಮೋದಿ ಹೆಸರು ಹೇಳಿಕೊಂಡು ಚುನಾವಣೆ ನಡೆಸಲು ಮುಂದಾಗಿದ್ದಾರೆ ಈ ಹಿಂದೆ ಜಾತ್ಯತೀತ ಇನ್ಮುಂದೆ ಕೋಮುವಾದಿ ಬಣ್ಣ ಹಚ್ಚಿದ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.




