Thursday, December 26, 2024

Latest Posts

ಅಪಘಾತದ ಕಥೆಯನ್ನು ಹಲ್ಲೆಯ ಕಥೆಯಾಗಿಸಿ ಎಡವಟ್ಟು ಮಾಡಿಕೊಂಡ ಬಿಜೆಪಿ ಮುಖಂಡ..

- Advertisement -

Kalaburgi News: ಕಲಬುರ್ಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಣಿಕಂಠ ರಾಠೋಡ್ ಮೇಲಿನ ಹಲ್ಲೆಯ ಅಸಲಿಯತ್ತು ಬಯಲಾಗಿದೆ.

ಮಣಿಕಂಠ ರಾಠೋಡ್ ಚಿತ್ತಾಪುರದ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿದ್ದ. ಕಾರು ಅಪಘಾತವನ್ನ ಹಲ್ಲೆ ಅಂತಾ ಬಿಂಬಿಸಿದ್ದ. ಕಾರು ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಈ ರೀತಿ ಕಥೆ ಕಟ್ಟಿದ್ದ ಎನ್ನಲಾಗಿದೆ. ನವೆಂಬರ್ 18 ರಂದು ಮಧ್ಯರಾತ್ರಿ ಹಲ್ಲೆ ನಡೆದಿರುವದಾಗಿ ಹೇಳಿ, ಕಲಬುರಗಿ ಜಿಲ್ಲೆಯ ಶಹಬಾದ್ ಬಳಿ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಬಗ್ಗೆ ಶಹಬಾದ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲು ಮಾಡಿದ್ದ.

ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಸರ್ಕಾರದ ವಿರುದ್ಧ, ಇಬ್ಬರೂ ನಾಯಕರು ವಾಗ್ದಾಳಿ ನಡೆಸಿದ್ದರು. ಇದೀಗ ತಮ್ಮದೆ ಪಕ್ಷದ ಚಿತ್ತಾಪುರ ಬಿಜೆಪಿ ಮುಖಂಡ ಹಲ್ಲೆಯ ಅಸಲಿಯತ್ತು ಬಟಾ ಬಯಲಾಗಿದ್ದು, ಮಣಿಕಂಠ ರಾಠೋಡ್ ಹಲ್ಲೆ ಕಥೆಯಿಂದ ಬಿಜೆಪಿಗೆ ಮುಜಗರವಾಗಿದೆ.

ಇಷ್ಟೇ ಅಲ್ಲದೇ, ಬಿಜೆಪಿ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ದೂರನ್ನು ಶಹಬಾದ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಅಟ್ಯಾಕ್ ಪ್ರಕರಣವನ್ನ ಬೆನ್ನತ್ತಿ ಹೋದಾಗ ಅಟ್ಯಾಕ್ ನ ಅಸಲಿಯತ್ತು ಬಯಲಾಗಿದೆ. ಮಣಿಕಂಠ ರಾಠೋಡ್ ಇನ್ನೋವಾ ಕ್ರೇಸ್ಟಾ ವೈಟ್ ಕಲರ್ ಕಾರು ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ನವೆಂಬರ್ 18 ರ ಮಧ್ಯರಾತ್ರಿ, ಮಣಿಕಂಠ ರಾಠೋಡ್ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆ‌ ಕಾರಿನಲ್ಲಿದ್ದ ಮಣಿಕಂಠ ರಾಠೋಡ್ ಗಾಯಗೊಂಡಿದ್ದ.

ಗಾಯಗೊಂಡ ಮಣಿಕಂಠ ರಾಠೋಡ್ ತನ್ನ ಮತ್ತೊಂದು ಕಾರಿನಲ್ಲಿ ಕಲಬುರಗಿಯತ್ತ ಪ್ರಯಾಣಿಸಿದ್ದ. ಅಪಘಾತಗೊಂಡ ಇನ್ನೋವಾ ಕ್ರೇಸ್ಟಾ ಕಾರು ರಾತ್ರೋ ರಾತ್ರಿ ಹೈದರಾಬಾದ್‌ಗೆ ಶಿಫ್ಟ್ ಆಗಿತ್ತು. ಮಣಿಕಂಠ ರಾತ್ರೋ ರಾತ್ರಿ ಕಾರನ್ನು ಟೋಯಿಂಗ್ ಮುಖಾಂತರ  ಹೈದರಾಬಾದ್ ಗೆ ಶಿಫ್ಟ್ ಮಾಡಿಸಿದ್ದ. ಇವನ ಬೆಂಬಲಿಗರು, ಹೈದರಾಬಾದ್ ಶೋ ರೂಮ್‌ನಲ್ಲಿ ಕಾರನ್ನು ಇರಿಸಿದ್ದರು.

ಇತ್ತ ಇನ್ನೊಂದು ಕಾರಿನಲ್ಲಿ ಮಣಿಕಂಠ ಚಿತ್ತಾಪುರಕ್ಕೆ ಆಗಮಿಸಿ, ಚಿತ್ತಾಪುರದಿಂದ ಕಲಬುರಗಿಗೆ ಬರುವಾಗ ಹಲ್ಲೆಯ ಕಥೆ ಕಟ್ಟಿದ್ದ. ತನ್ನದೇ  ಕಾರಿನ ಗಾಜನ್ನ ಒಡೆದು ಹಾಕಿ ಏಳೆಂಟು ದುಷ್ಕರ್ಮಿಗಳಿಂದ ಹಲ್ಲೆಯ ಸೀನ್ ಕ್ರಿಯೇಟ್ ಮಾಡಿದ್ದ. ಹಲ್ಲೆ ಸಂಬಂಧ ಚಿತ್ತಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದ.ಮಣಿಕಂಠ ರಾಠೋಡ್ ಕಾರಿನಲ್ಲಿ ಬರುವಾಗ ಹಲ್ಲೆಯಾದ ಕಾರ್ ನಲ್ಲಿ ಒಂದೆ ಒಂದು ಹನಿ ರಕ್ತ  ಬಿದ್ದಿರಲಿಲ್ಲ.

ಮಣಿಕಂಠ ರಾಠೋಡ್ ಕಾಲ್ ರೇಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಹಲ್ಲೆಯ ಕಥೆ ಅಪಘಾತದ ಕಥೆಯಾಗಿ ಬಯಲಾಗಿದೆ. ಹಲ್ಲೆ ಪ್ರಕರಣ ಭೇದಿಸಿದ ಬಳಿಕ ಮಣಿಕಂಠ ರಾಠೋಡ್ ಜೊತೆಗಿದ್ದವನನ್ನ ವಿಚಾರಣೆ ನಡೆಸಿದಾಗ, ರಾಠೋಡ್ ಬೆಂಬಲಿಗರು ಅಪಘಾತದ ಕಥೆ ಬಿಚ್ಚಿಟ್ಟಿದ್ದಾರೆ.

‘ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ’

ಜಾತಿ ಕಾರಣಕ್ಕೆ ನನ್ನನ್ನು ಆರ್ಎಸ್ಎಸ್ ಕಚೇರಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ: ಗೂಳಿಹಟ್ಟಿ ಶೇಖರ್

‘ಡೈನಾಮಿಕ್ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಸುಖಾಸುಮ್ಮನೆ ಆರೋಪ ಮಾಡ್ತಾ ಇದ್ದಾರೆ’

- Advertisement -

Latest Posts

Don't Miss