Political News: ಹುಬ್ಬಳ್ಳಿ: ಶೂದ್ರರು ಮತ್ತು ದಲಿತರಿಗೆ ಆರ್‌ಎಸ್‌ಎಸ್ ಗರ್ಭಗುಡಿಯಲ್ಲಿ ಪ್ರವೇಶ ಇಲ್ಲ ಎಂಬ ಗೂಳಿ ಹಟ್ಟಿ ಶೇಖರ್ ಆಡಿಯೋ ವೈರಲ್ ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್‌ರಿ ಚಂದ್ರು, ಈ ರೀತಿಯ ಅನುಭವಗಳು ನನಗೂ ಆಗಿದೆ ಎಂದಿದ್ದಾರೆ.
ನಾನೂ ಆ ಪಕ್ಷದಲ್ಲಿ ಇದ್ದು ಬಂದವನು. ಕೆಲವೊಂದಿಷ್ಟು ವಿಷಯಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಲವೊಂದು ಕಡೆ ನಮಗೆ ಆಹ್ವಾನವೂ ಇರುತ್ತಿರಲಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿಕೆ ನಂತ್ರ ನನಗೂ ಮನವರಿಕೆ ಆಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಮೋದಿಯವರು ಪರಿವಾರ ರಾಜಕಾರಣಕ್ಕೆ ನನ್ನ ಸಮ್ಮತಿ ಇಲ್ಲ ಅಂತಾರೆ. ಆದ್ರೆ ಯಡಿಯೂರಪ್ಪನವರು ರಾಷ್ಟ್ರೀಯ ಕಾರ್ಯಕಾರಣಿಯಲ್ಲಿದ್ದಾರೆ. ಅವರ ಓರ್ವ ಮಗ ಸಂಸದ, ಮತ್ತೋರ್ವ ಮಗ ರಾಜ್ಯಾಧ್ಯಕ್ಷ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ದ್ದು ಕೂಡ ಇದೇ ಪರಿಸ್ಥಿತಿ. ದೇವೇಗೌಡ್ರ ಕುಟುಂಬವನ್ನ ನೋಡಿದ್ರೆ ಇದೆಲ್ಲ ಅರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇನ್ನು ಭವಾನಿ ರೇವಣ್ಣ ಅಪಘಾತ ಕೇಸ್ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಚಂದ್ರು, ಬೈಕ್ ಸವಾರನ ಜೊತೆ ಭವಾನಿ ರೇವಣ್ಣ ವರ್ತನೆ ಸರಿ ಆದದ್ದು ಅಲ್ಲ. ಇದನ್ನ ದೇವೇಗೌಡ್ರು ಇದನ್ನ ಖಂಡಿಸಬೇಕಿತ್ತು. ರೇವಣ್ಣ ಮತ್ರು ಅವರ ಪುತ್ರ ರಾಜೀನಾಮೆ ನೀಡಬೇಕಿತ್ತು. ಭವಾನಿ ರೇವಣ್ಣ ಯಾವುದೇ ಚುನಾವಣೆ ಸ್ಪರ್ಧೆ ಮಾಡದಂತೆ ನಿರ್ಣಯ ತೆಗೆದುಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ. ಈ ಮೂರು ಪಕ್ಷಗಳು ಜನರನ್ನ ಲೂಟಿ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ Flipkart ಗೆ 20,000 ರೂ ದಂಡ
ಪ್ರವಾಸಿಗರಿಗೆ ಸಿಹಿಸುದ್ದಿ: ಡಿ.11 ರಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು!


