Thursday, August 21, 2025

Latest Posts

ರಾಜಸ್ಥಾನದ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ..

- Advertisement -

National Political News: ರಾಜಸ್ಥಾನದಲ್ಲಿ ಸಿಎಂ ಆಗಿ ವಸುಂಧರಾ ರಾಜೆ ಅಥವಾ ಬಾಬಾ ಬಾಲಕ್‌ನಾಥ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ, ಬಿಜೆಪಿ ಹೈಕಮಾಂಡ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದು, ಭಜನ್ ಲಾಲ್ ಶರ್ಮಾ ಅವರನ್ನು ರಾಜಸ್ಥಾನ ಸಿಎಂ ಮಾಡಲು ನಿರ್ಧಾರ ಮಾಡಿದೆ.

ಇನ್ನೊಂದು ಸಂಗತಿ ಏನಂದ್ರೆ, ಭಜನ್ ಲಾಲ್ ಶರ್ಮಾ, ಮೊದಲನೇಯ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರೂ ಕೂಡ, ಹೈಕಮಾಂಡ್ ಇವರಿಗೇ ಸಿಎಂ ಸ್ಥಾನದಲ್ಲಿ ಕೂರಿಸಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಛತ್ತೀಸ್‌ಘಡ್, ಮಧ್ಯಪ್ರದೇಶದಲ್ಲೂ ಬಿಜೆಪಿ ಹೊಸ ಮುಖಗಳನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದು, ರಾಜಸ್ಥಾನದಲ್ಲೂ ಇದೇ ನಡೆ ಮುಂದುವರಿಸಿದೆ.

ಸಾಂಗನೇರ್ ಕ್ಷೇತ್ರದ ಶಾಸಕರಾಗಿರುವ ಶರ್ಮಾ, ಅಮಿತ್ ಷಾ ಆಪ್ತ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಸಿಎಂ ಸ್ಥಾನ ಸಿಕ್ಕಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಇವರು 48 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದು, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ರಾಜಸ್ಥಾನದಲ್ಲಿ 5ರಿಂದ 6 ಜನ ಬಿಜೆಪಿಯ ಪ್ರಮುಖರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಸಿಎಂ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಡಿಸಿಎಂ ಆದುವ ಅವಕಾಶ ಸಿಕ್ಕಿದೆ. ಇನ್ನುಳಿದ ಸಿಎಂ ಆಕಾಂಕ್ಷಿಗಳನ್ನು ಬಿಜೆಪಿ ಹೈಕಮಾಂಡ್‌ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

‘ಹರಿಪ್ರಸಾದ್ ರನ್ನ ಹೊರತುಪಡಿಸಿ ಒಂದು ಸಮಾವೇಶ ಮಾಡ್ತಿಲ್ವಾ. ಎಲ್ಲವೂ ನನಗೆ ಗೊತ್ತಿದೆ’

ಲೋಕಸಭೆಯಲ್ಲಿ ನಮ್ಮ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿಗೆ ಸಂಸದೆ ಸುಮಲತಾ ವಿನಂತಿ

ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss