Political News: ಹುಬ್ಬಳ್ಳಿ: ಹಿಂದಿನಿಂದಲೂ ಭಾರತದ ಮೇಲೆ ಭಯೋತ್ಪಾದಕರ ಹಾಗೂ ದೇಶದ್ರೋಹಿಗಳು ಕಣ್ಣಿಟ್ಟಿದ್ದಾರೆ. ಇಂತಹ ದುಷ್ಟ ಶಕ್ತಿಯನ್ನು ಮೆಟ್ಟಿನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ದುಷ್ಟ ಶಕ್ತಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಲೋಕಸಭೆ ಸದನದಲ್ಲಿ ಅಪರಿಚಿತ ವ್ಯಕ್ತಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದ್ರೋಹಿ ಚಟುವಟಿಕೆಗಳು ಭಯ ಹುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ, ರಾಜಭವನದಲ್ಲಿ ಕೂಡ ಭಯವನ್ನು ಹುಟ್ಟು ಹಾಕಿದ್ದಾರೆ. ಈಗ ಸದನದಲ್ಲಿ ಕೂಡ ಇಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಬೆಂಬಲ ಸಿಗುತ್ತಿರುವ ಹಿನ್ನೆಲೆಯಲ್ಲಿ ದುಷ್ಕೃತ್ಯಗಳು ನಡೆಯುತ್ತಿವೆ ಎಂದರು.
ಮೈಸೂರು ಎಂಪಿ ಪಾಸ್ ತೆಗೆದುಕೊಂಡು ಎಂಟ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪರಿಚಿತರು ಎಂದು ಪಾಸ್ ಕೊಟ್ಟಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಶಕ್ತಿ ಶಾಲಿಯಾಗಿದೆ. ಮೂರು ನಾಲ್ಕು ಜನರಲ್ಲಿ ಅಸಮಾಧಾನ ಇದೆ. ಅಸಮಾಧಾನ ಇದ್ದವರೂ ಕೂಡ ಪಕ್ಷ ನಿಷ್ಟರೇ ವೈಯಕ್ತಿಕ ಅಸಮಾಧಾನದಿಂದ ಗೊಂದಲ ಉಂಟಾಗಿದೆ ಇದನ್ನು ಪಕ್ಷದ ವರಿಷ್ಠರು ಸರಿಪಡಿಸುವ ಕಾರ್ಯವನ್ನು ಮಾಡುತ್ತಾರೆ ಎಂದು ಅವರು ಹೇಳಿದರು.
ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ತೆರಳಿದ ಮಾಲಾಧಾರಿಗಳು: ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ
ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ
ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್ ಸಿಡಿಸಿದ ಅನಾಮಿಕ

