Saturday, October 19, 2024

Latest Posts

ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar

- Advertisement -

Political News: ಲೋಕಸಭೆ ಕಲಾಪ ನಡೆಯುತ್ತಿರುವಾಗಲೇ, ಸಂಸತ್ತಿನಲ್ಲಿ ಮೇಲಿನಿಂದ ಜಿಗಿದ ಇಬ್ಬರು, ಅಶ್ರುವಾಯು ಸಿಡಿಸಿದ ಘಟನೆಯನ್ನು, ಡಿಸಿಎಂ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2001ರ ಸಂಸತ್ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇಂದು ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ. ನಮ್ಮ ಸಂಸತ್ತು ದೇಶದ ಅತ್ಯಂತ ಉತ್ತಮ ಸಂರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಈ ಉಲ್ಲಂಘನೆಯು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.

ಈ ಗಂಭೀರ ಭದ್ರತಾ ಲೋಪದ ತಳಹದಿಯನ್ನು ಪಡೆಯಲು ಸಂಪೂರ್ಣ ತನಿಖೆಯನ್ನು ಕೈಗೊಳ್ಳಬೇಕು, ಇದರಿಂದ ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆ ಮತ್ತೆ ಮರುಕಳಿಸುವುದಿಲ್ಲ ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಅವರು ಬುದ್ಧಿವಂತರು. ಆದರೂ ಕೂಡ ಇಂಥವರಿಗೆಲ್ಲ ಅದು ಹೇಗೆ ಪಾಸ್ ಕೊಟ್ರೋ ಗೊತ್ತಿಲ್ಲ ಎಂದಿದ್ದಾರೆ. ಮೈಸೂರು ಮೂಲದ ಮನೋರಂಜನ್ ಮತ್ತು ಸಾಗರ್ ಶರ್ಮಾ ಎಂಬುವವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಇವರು ಪ್ರತಾಪ್ ಸಿಂಹ ಮೂಲಕ ಪಾಸ್ ಪಡೆದು, ಸಂಸತ್ತಿನ ಒಳಗೆ ಹೋಗಿದ್ದರು.

ಅಯ್ಯಪ್ಪಸ್ವಾಮಿ ದರ್ಶನವಿಲ್ಲದೇ ತೆರಳಿದ ಮಾಲಾಧಾರಿಗಳು: ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲ

ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗದ ಸದ್ಯದ ವಸ್ತುಸ್ಥಿತಿಯ ಬಗ್ಗೆ ಪ್ರಶ್ನಿಸಿದ ಸಂಸದೆ ಸುಮಲತಾ

ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್‌ ಸಿಡಿಸಿದ ಅನಾಮಿಕ

- Advertisement -

Latest Posts

Don't Miss