ಇದೇ ದಿನ ಸಂಸತ್‌ ಮೇಲೆ ದಾಳಿ ನಡೆಸುುತ್ತೇನೆಂದು ಹೇಳಿದ್ದ ಖಲಿಸ್ತಾನಿ ಉಗ್ರ..

International News: ಖಲಿಸ್ತಾನಿ ಉಗ್ರ ಪನ್ನು, ದೆಹಲಿಯ ಸಂಸತ್‌ ಮೇಲೆ ಡಿಸೆಂಬರ್ 13ರಂದು ದಾಳಿ ಮಾಡುವುದಾಗಿ ಹೇಳಿದ್ದು, ಇದೀಗ ಬಯಲಿಗೆ ಬಂದಿದೆ. ಅಮೆರಿಕದಲ್ಲಿರುವ ಭಾರತ ಮೂಲದ ವ್ಯಕ್ತಿ ನಿಖಿಲ್‌ ಖಲಿಸ್ತಾನಿ ಉಗ್ರ ಪನ್ನು ಹತ್ಯೆಗೆ ಪ್ರಯತ್ನಿಸಿದ್ದ ಎಂದು ಅಮೆರಿಕ ಆರೋಪಿಸಿತ್ತು. ಇದೇ ವಿಚಾರಕ್ಕೆ ಪನ್ನು ಸಂಸತ್‌ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಭಾರತದ ವಿರುದ್ಧ ಆಕ್ರಮಣಕಾರಿ ನಿಲುವು ತಾಳಿರುವ ಪನ್ನು, ಭಾರತ ಮತ್ತು ಕೆನಡಾ ಪೌರತ್ವ ಹೊಂದಿದ್ದು, ದೆಹಲಿ ಬನೇಗಾ ಖಲಿಸ್ತಾನ್ ಎನ್ನುವ ಕ್ಯಾಪ್ ಕೂಡ ಧರಿಸಿದ್ದ. 2001ರಲ್ಲಿ ಸಂಸತ್‌ ಮೇಲೆ ದಾಳಿ ನಡೆದಾಗ, ಆರೋಪಿಯಾಗಿದ್ದ ಅಫ್ಜಲ್ ಗುರುವನ್ನ 2013ರಲ್ಲಿ ನೇಣಿಗೇರಿಸಲಾಗಿತ್ತು. ಆಗ ಅಪ್ಜಲ್ ಫೋಟೋ ಹಿಡಿದು ಪನ್ನು ವೀಡಿಯೋ ಕೂಡ ಮಾಡಿದ್ದ.

ಇದೀಗ 22 ವರ್ಷಗಳ ಬಳಿಕ, ಮತ್ತೇ ಇದೇ ದಿನ ಸಂಸತ್ ಮೇಲೆ ದಾಳಿ ಮಾಡುತ್ತೇನೆಂದು ಹೇಳಿದ್ದ. ಇಂದು ಬೆಳಿಗ್ಗೆ ಕಲಾಪ ನಡೆಯುವ ಹೊತ್ತಿಗೆ, ಭಾರತದವರೇ ಕಲಾಪದಲ್ಲಿ ಅಶ್ರುವಾಯು ಸಿಡಿಸಿದ್ದು, ಭದ್ರತಾ ಲೋಪ ಕಂಡುಬಂದಿದೆ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಭದ್ರತಾ ಲೋಪ: ಲೋಕಸಭಾ ಕಲಾಪ ನಡೆಯುವಾಗಲೇ ಕಲರ್ ಬಾಂಬ್‌ ಸಿಡಿಸಿದ ಅನಾಮಿಕ

ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar

‘ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ’

About The Author