‘ಹಿಂದಿನ ಕಹಿ ನೆನಪು ಇನ್ನೂ ಇದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು’

Hubballi political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್, ಸಂಸತ್ ನಲ್ಲಿ ಯುವಕರು ಒಳನುಗ್ಗಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದು ಸಂಪೂರ್ಣ ತನಿಖೆಯಾಗಬೇಕು. ನಿನ್ನೆ ಆದ ಘಟನೆ ಬಹಳ ಖಂಡೀನಿಯ. ಈ ರೀತಿ ಘಟನೆ ನಡೆಯಬಾರದು. ಹಿಂದಿನ ಕಹಿ ನೆನಪು ಇನ್ನು ಇದೆ. ಕೆಲ ಯುವಕರು ನಿನ್ನೆ ಒಳಹೋಗಿದ್ದಾರೆ. ಯಾರಿಗೆ ಜೀವ ಹಾನಿ ಮಾಡ್ತಿದ್ರೋ ಗೊತ್ತಿಲ್ಲ. ಇದೊಂದು ಭದ್ರತಾ ವೈಫಲ್ಯ. ಇದಕ್ಕೆ ಮೂಲ ಕಾರಣ ಯಾರು, ಮೂಲ ಬೇರು ತಗೆದು ಹಾಕೋ ಕೆಲಸ ಆಗಬೇಕು. ಕೇಂದ್ರ ಸರ್ಕಾರ ಸಂಪೂರ್ಣ ತನಿಖೆ ಮಾಡಬೇಕು.. ಇದು ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಂಸತ್ ಅನ್ನೋದು ದೇಶದ ಹೃದಯ ಭಾಗ. ಯಾರು ಈ ಕೆಲಸ ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು.
ಇಂತಹ ಘಟನೆ ಪದೇ ಪದೇ ಆಗುತ್ತಿವೆ. ಸರಿಯಾಗಿ ತಿಳಿದುಕೊಂಡು‌ ಪಾಸ್ ಕೊಡಬೇಕು. ಸಮಗ್ರ ತನಿಖೆಯಾಗಬೇಕು, ಯಾಕೆ ಅವರು ಈ ಕೃತ್ಯಕೆ ಕೈ ಹಾಕಿದ್ರು ಅನ್ನೋದು ತನಿಖೆಯಾಗಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.


‘ಈ ಸುದ್ದಿ ನಿಜವೇ ಆಗಿದ್ದರೆ ಇದು ಕರ್ನಾಟಕದ ಪಾಲಿಗೆ ಕಪ್ಪುಚುಕ್ಕೆ‌’

‘ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ, ನಮ್ಮ ಎಲೆಯಲ್ಲಿ ನೊಣವನ್ನು ಹುಡುಕಿದಂತಿದೆ ಬಿಜೆಪಿಗರ ದುಸ್ಥಿತಿ’

ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar

About The Author