Dharwad News: ಧಾರವಾಡ: ಕಷ್ಟಪಟ್ಟು ಬೆಳೆದ ರೈತನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.
ಚೆನ್ನಪ್ಪ ಹುಡ್ಕೇರಿಯವರಿಗೆ ಸೇರಿದ 2 ಲಕ್ಷ ರೂಪಾಯಿ ಬೆಲೆಯ ಮೆಕ್ಕೆ ಜೋಳದ ತೆನೆಗೆ ದುರುಳರು ಬೆಂಕಿ ಇಟ್ಟಿದ್ದಾರೆ. ಚೆನ್ನಪ್ಪ ಈ ಬೆಳೆಯನ್ನು 5 ಎಕರೆ 12 ಗುಂಟೆಯಲ್ಲಿ ಬೆಳೆದಿದ್ದರು. ಮೆಕ್ಕೆಜೋಳ ರಾಶಿ ಮಾಡುವ ಉದ್ದೇಶದಿಂದ ತೆನೆಯನ್ನು ಹೊಲದಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಮಧ್ಯರಾತ್ರಿ ಬಂದ ದುಷ್ಕರ್ಮಿಗಳು, ತೆನೆಗಳಿಗೆ ಬೆಂಕಿ ಹಾಕಿ, ವಿಕೃತಿ ಮೆರೆದಿದ್ದಾರೆ.
ತೆನೆಗೆ ಬೆಂಕಿ ಬಿದ್ದು, ವಿಷಯ ತಿಳಿದು ರೈತ ಚೆನ್ನಪ್ಪ ಕಣ್ಣೀರು ಹಾಕಿದ್ದಾರೆ. ತಾವು ಸಾಲ ಮಾಡಿ ಬೆಳೆದ ಬೆಳೆಯನ್ನು ಈ ರೀತಿ ಹಾನಿ ಮಾಡಿದ್ದಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ರನ್ನು ಭೇಟಿ ಮಾಡಿ, ನ್ಯಾಯ ಕೊಡಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೇ ಈ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ನಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮಲಗಿದ್ದವರ ಮೇಲೆ ಬಿದ್ದ ಮೇಲ್ಛಾವಣಿ: 7 ಮಂದಿಗೆ ಗಾಯ, ಓರ್ವ ಬಾಲಕಿಯ ಸ್ಥಿತಿ ಗಂಭೀರ
‘ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ’