ಟಿಪ್ಪು ಹೆಸರನ್ನ ಬೇಕಾದ್ರೆ ಶೌಚಾಲಯಗಳಿಗೆ ಇಡಲಿ : ಶಾಸಕ ಯತ್ನಾಳ್

Political News: ಬೆಳಗಾವಿ : ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ಟಿಪ್ಪು ಹೆಸರನ್ನ ಬೇಕಾದ್ರೆ ಶೌಚಾಲಯಗಳಿಗೆ ಇಡಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.

ಟಿಪ್ಪು ನಾಲ್ಕು ಸಾವಿರ ದೇವಸ್ಥಾನ ಧ್ವಂಸ ಮಾಡಿದವನು. ಅವನ ಖಡ್ಗದ ಮೇಲೆ ಮುಸ್ಲಿಮರಲ್ಲದವರನ್ನು ಹತ್ಯೆ ಮಾಡಿ ಅಂತ ಬರೆದಿತ್ತು. ಹೀಗಾಗಿ, ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗೂ ಭಾರತಕ್ಕೆ ಅಪಾರವಾದದ್ದು ಎಂದು ಹೇಳಿದ್ದಾರೆ.

ಇಂಥ 10 ಖರ್ಗೆಗಳು ಬಂದ್ರೂ..!

ವೀರ ಸಾವರ್ಕರ್‌ ಫೋಟೋ ತೆರವು ಮಾಡಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಯತ್ನಾಳ್ ಕಿಡಿಕಾರಿದರು. ಇಂಥ 10 ಖರ್ಗೆಗಳು ಬಂದರೂ ವೀರ ಸಾವರ್ಕರ್ ಫೋಟೋ ತೆಗೆಯಲು ಆಗಲ್ಲ. ಸಾವರ್ಕರ್‌ ಫೋಟೋ ತೆಗೆದು ನೆಹರೂ ಫೋಟೋ ಹಾಕಿದರೆ ನಾವು ಅದನ್ನೂ ತೆಗೆದು ಹಾಕುತ್ತೇವೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಉಳ್ಳಾಗಡ್ಡಿಮಠ ಬೆಂಬಲಿಗರಿಂದ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಭರ್ಜರಿ ಸ್ವಾಗತ: ರಜತ್‌ಗೆ ಟಿಕೆಟ್ ನೀಡುವಂತೆ ಮನವಿ

‘ನಡ್ಡಾ ಅವರಿಗೆ ದಮ್ಮು-ತಾಕತ್ ಇದ್ದರೆ, ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ’

ರೈತರಿಗೆ ಗುಡ್ ನ್ಯೂಸ್: ಸಹಕಾರಿ ಸಾಲದ ಮೇಲಿನ ಬಡ್ಡಿ ಮನ್ನಾ

About The Author